Breaking News

” ಸೇವ್ ರೀಚಾರ್ಜ್ ” ಎಂಬ ವೆಬ್ ಸೈಟ್ ಹೆಸರಿನಲ್ಲಿ ಗ್ರಾಹಕರಿಗೆ ದೊಖಾ.

 

ಸೇವ್ ರೀಚಾರ್ಜ್ ಎಂಬ ವೆಬ್ ಸೈಟ್ ಮೊಬೈಲ್ ಗ್ರಾಹಕರಿಗೆ ಪ್ರತೀ ತಿಂಗಳು 249 ರೂ. ರಿಚಾರ್ಜ್ ಮಾಡಿ, ಪ್ರತಿ ದಿನ 2 gb ಡಾಟಾ, ಅನ್ ಲಿಮಿಟೆಡ್ ಹೊರಹೋಗುವ ಕರೆ, 100 sms ಉಚಿತವಾಗಿ ನೀಡುತ್ತೇವೆ ಎಂದು ಮೊಬೈಲ್ ಗ್ರಾಹಕರಿಂದ ಒಂದು ವರ್ಷದ ರಿಚಾರ್ಜ್ ಮಾಡುತ್ತೇವೆಂದು ನಂಬಿಸಿ 1250 ರೂ. ವರ್ಷದ ಪ್ಯಾಕೇಜ್ ಎಂದು ಹೇಳಿ ಸೇವ್ ರಿಚಾರ್ಜ್ ವಾಲೆಟ್ ಗೆ ಹಣ ಹಾಕಿಸಿಕೊಳ್ಳಲಾಗಿದೆ.

ವೆಬ್ ಸೈಟ್ ಮೋಸದ ಜಾಲ ಅರಿಯದೆ ಹಣ ನೀಡಿ ಪಿನ್ ಪಡೆದು ಗ್ರಾಹಕರಿಂದ ವಾಲೆಟ್ ಗೆ ಹಣ ಹಾಕಿಸಿದಾರೆ. ಒಂದೆರಡು ತಿಂಗಳು ರಿಚಾರ್ಜ್ ಮಾಡಿ ಇದೀಗ ವೆಬ್ ಸೈಟ್ ಅಪ್ ಗ್ರೇಡ್ ಹೆಸರಿನಲ್ಲಿ ರಿಚಾರ್ಜ್ ಮಾಡದೆ ನಿಲ್ಲಿಸಿದರೆ. ರಾಜ್ಯದಲ್ಲಿ ಈ ಕಂಪನಿಯನ್ನು ನಂಬಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮೊಬೈಲ್ ಗ್ರಾಹಕರು ವರ್ಷದ ರಿಚಾರ್ಜ್ ಹಣ 1250 ರೂ. ಹಾಕಿದ್ದಾರೆ. ಕಂಪನಿಯ ಅವರು ಶಿವಮೊಗ್ಗ ಜಿಲ್ಲಾದ್ಯಂತ ಹಾಗೂ ಅಂತರ್ ಜಿಲ್ಲಾ ವ್ಯಾಪ್ತಿಯಲ್ಲಿ ಕಂಪನಿ ಪರವಾಗಿ ಪ್ರಚಾರ ಮಾಡಿ ರೀಚಾರ್ಜ್ ಮಾಡಲು ಪ್ರೇರೇಪಿಸಿ ಇದೀಗ ವಂಚನೆ ಮಾಡಿದಾರೆ. ರಿಚಾರ್ಜ್ ಬಗ್ಗೆ ಇವರನ್ನು ಕೇಳಿದರೆ ದೌರ್ಜನ್ಯದ ಮಾತನಾಡುತ್ತಿದ್ದಾರೆ.ವಾಲೆಟ್ ಗೆ ಹಣ ಹಾಕಿರುವ ಗ್ರಾಹಕರು ಅಂಗಡಿಗಳಿಗೆ ಬಂದು ಕೇಳುತ್ತಿದ್ದು, ಅನುವಾರ್ಯವಾಗಿ ನಾವೇ ರಿಚಾರ್ಜ್ ಮಾಡಿಕೊಡುವಂತಾಗಿದೆ. ಇದರಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಆಗಿರುವುದರಿಂದ ಕಂಪನಿ ಮುಟ್ಟುಗೋಲು ಹಾಕಿ ಸೂಕ್ತ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಜಿಲ್ಲಾ ರಕ್ಷಣಾಧಿಕಾರಿಗಳಿಗರ ದೂರು ನೀಡಲಾಗಿದೆ.

Leave a Reply

Your email address will not be published. Required fields are marked *

*