ಶಿವಮೊಗ್ಗ: ಶಿವಮೊಗ್ಗ ನಗರಾದ್ಯಂತ ಸ್ಮಾರ್ಟ್ ಸಿಟಿ ಕಾಮಗಾರಿ ಭರದಿಂದ ಸಾಗಿದ್ದು, ಅವೈಜ್ಞಾನಿಕ ಕಾಮಗಾರಿಗಳು ಜನರ ಬಲಿಪಡೆಯಲು ಬಾಯ್ದೆರೆದು ಕುಳಿತಿವೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಕೆಲಸ ನಡಿಯುತ್ತಿದ್ದು, ರಸ್ತೆ ಮೇಲೆ ಅವೈಜ್ಞಾನಿಕವಾಗಿ ಗುಂಡಿಗಳನ್ನು ತೆಗೆದಿದ್ದರಿಂದಾಗಿ ವಿದ್ಯುತ್ ಕಂಬಗಳು ರಸ್ತೆಗೆ ವಾಲಲಾರಂಭಿಸಿವೆ. ಒಂದು ವೇಳೆ ವಿದ್ಯುತ್ ತಂತಿ ವಾಹನಗಳಿಗೆ ತಗುಲಿದರೆ ಬಾರಿ ಪ್ರಾಣಾಪಾಯವಾಗುವ ಸಾಧ್ಯತೆಯಿದೆ. ಕೂಡಲೇ ಸಂಬಂಧಿಸಿದವರು ಸಮರ್ಪಕ ಕಾಮಗಾರಿ ನಡೆಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
Recent Comments