ಶಿವಮೊಗ್ಗ : ಅಕ್ಟೋಬರ್ 14ರಂದು ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯ ಛತ್ರದಳ್ಳಿ ಗ್ರಾಮದ ವಾಸಿ ಮಹಿಳೆಯೊಬ್ಬರ ಮನೆಗೆ ನುಗ್ಗಿ ಚಿನ್ನಾಭರಣ ಲೂಟಿ ಮಾಡಿದ್ದ ಮೂವರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.
ತಮ್ಮ ಮನೆಯಲ್ಲಿರುವ ಸಮಯದಲ್ಲಿ ಯಾರೋ 05 ಜನ ದರೋಡೆಕೋರರು ಮನೆಗೆ ನುಗ್ಗಿ, ತಮ್ಮ ಕೊರಳಿನಲ್ಲಿದ್ದ ಬಂಗಾರದ ಗುಂಡುಗಳಿದ್ದ ತಾಳಿ ಸರವನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೊರಬ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಆರೋಪಿಗಳ ಪತ್ತೆಗಾಗಿ
ಶ್ರೀನಿವಾಸಲು IPS, ಎ.ಎಸ್.ಪಿ ಶಿಕಾರಿಪುರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ
ಮರುಳಸಿದ್ದಪ್ಪ ಪೊಲೀಸ್ ನಿರೀಕ್ಷಕರು, ಸೊರಬ ವೃತ್ತ ನೇತೃತ್ವದಲ್ಲಿ ಪ್ರಶಾಂತ್ ಕುಮಾರ್, ಪಿಎಸ್ಐ ಸೊರಬ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಲಾಗಿತ್ತು.
ಈ ತಂಡ ಕಾರ್ಯಾಚರಣೆ ನಡೆಸಿ,
ಆರೋಪಿತರಾದ ಪ್ರಶಾಂತ್ 27 ವರ್ಷ ಮಂಗಾಪುರ ಗ್ರಾಮ ಸೊರಬ, ಗಣೇಶ 22 ವರ್ಷ ವಾಸ ಮೈಸೂರು ಟೌನ್, ಪ್ರಶಾಂತ 20 ವರ್ಷ ವಾಸ ಅಕ್ಕಿ ಆಲೂರು ಗ್ರಾಮ ಹಾವೇರಿ ಅವರನ್ನು ವಶಕ್ಕೆ ಪಡೆದು, ಕೃತ್ಯಕ್ಕೆ ಬಳಸಿದ ಓಮಿನಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಫಿರ್ಯಾದುದಾರರ ಮನೆ ಕಟ್ಟುವ ಸಮಯದಲ್ಲಿ ಪಿರ್ಯಾದುದಾರರ ಕುಟುಂಬದವರಿಗೂ ಹಾಗೂ ಆರೋಪಿತರಿಗೂ ಉಂಟಾದ ಹಣಕಾಸಿನ ವೈಮನಸ್ಸಿನ ಕಾರಣಗಳಿಂದ ಈ ಕೃತ್ಯವು ಜರುಗಿರುವುದು ಈವರೆಗಿನ ತನಿಖೆಯಿಂದ ತಿಳಿದು ಬಂದಿರುತ್ತದೆ.
ಪ್ರಕರಣದಲ್ಲಿ ಇನ್ನು ಕೆಲವರನ್ನು ಬಂಧಿಸುವುದು ಬಾಕಿ ಇರುತ್ತದೆ. ಅವರನ್ನೂ ಸಹಾ ಶೀಘ್ರದಲ್ಲಿ ಕಾನೂನಿಗೊಳಪಡಿಸಲಾಗುವುದು.
ಪ್ರಕರಣದ ತನಿಖೆಯನ್ನು ಸಿಪಿಐ ಸೊರಬ ರವರು ಮುಂದುವರೆಸಿರುತ್ತಾರೆ ಎಂದು ಎಸ್ಪಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.
Recent Comments