Breaking News

ಸಾಗರ-ತಾಳಗುಪ್ಪ ರೈಲ್ವೆ ಕ್ರಾಸಿಂಗ್ ತಾಂತ್ರಿಕ ಪರಿಶೀಲನೆ: ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ

 

ಶಿವಮೊಗ್ಗ  : ಸಾಗರ-ಜಂಬುಗಾರು-ತಾಳಗುಪ್ಪ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ. 152ರ ಮಾರ್ಗದಲ್ಲಿ ತಾಂತ್ರಿಕ ಪರಿಶೀಲನೆ ಕಾರ್ಯ ಇರುವುದರಿಂದ ಅಕ್ಟೋಬರ್ 16 ರ ಬೆಳಗ್ಗೆ 7.30 ರಿಂದ ಅ. 17 ರ ಬೆಳಗ್ಗೆ 7.30 ರವರಿಗೆ ರಸ್ತೆ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ಪರ್ಯಾಯವಾಗಿ ಲೆವೆಲ್ ಕ್ರಾಸ್ ನಂ. 147ರ ಸಾಗರ-ಕಾನಲೆ ಕ್ರಾಸ್-ಗಡೆಮನೆ-ತಾಳಗುಪ್ಪ ಅಥವಾ ಸಿದ್ದಾಪುರ ಮುಖಾಂತರ ಹಾಗೂ ಸಿದ್ದಾಪುರ ಲೆವೆಲ್ ಕ್ರಾಸಿಂಗ್-13ರ ಸಾಗರ-ಕೆಳದಿ-ಕಾಗೋಡು-ತಾಳಗುಪ್ಪ ಮಾರ್ಗವಾಗಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

*