ಕಾಶ್ಮೀರ : ಲಷ್ಕರ್-ಎ-ತೊಯ್ಬಾ ಉಗ್ರರ ದಾಳಿ, ನಟಿ ಸಾವು.
Cnewstv.in / 26.05.2022 / ಶ್ರೀನಗರ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕಾಶ್ಮೀರ : ಲಷ್ಕರ್-ಎ-ತೊಯ್ಬಾ ಉಗ್ರರ ದಾಳಿ, ನಟಿ ಸಾವು.
ಶ್ರೀನಗರ : ಜಮ್ಮು-ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರರು ದಾಳಿ ನಡೆಸಿದ್ದು, ನಟಿ ಸಾವನ್ನಪ್ಪಿದ್ದು, 10 ವರ್ಷದ ಬಾಲಕ ಗಾಯಗೊಂಡಿದ್ದಾನೆ.
ರಾತ್ರಿ 8 ಗಂಟೆ ಸಮಯಕ್ಕೆ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಅಮ್ರೀನ್ ಭಟ್ ಎಂಬ ನಟಿ ಮನೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಗಾಯಗೊಂಡಿದ್ದ ನಟಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಆಕೆ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ.
35 ವರ್ಷದ ನಟಿ ಅಮ್ರೀನ್ ಭಟ್ ಸಾಮಾಜಿಕ ಮಾಧ್ಯಮ ಪ್ರಭಾವಿ ಮಹಿಳೆಯಾಗಿದ್ದಳು. ಆಕೆಯ ಸೋದರಳಿಯ ಫಹಾಲ್ ಜುಬೈರ ಕೂಡ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರದೇಶವನ್ನು ಸುತ್ತುವರೆದಿರುವ ಭಯೋತ್ಪಾದಕರು ಉದ್ದೇಶಪೂರ್ವಕವಾಗಿ 24ಗಂಟೆಯಲ್ಲಿ ಎರಡು ಬಾರಿ ದಾಳಿ ನಡೆಸಿದ್ದಾರೆ.
ಇದನ್ನು ಒದಿ : https://cnewstv.in/?p=9943
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ಕಾಶ್ಮೀರ : ಲಷ್ಕರ್-ಎ-ತೊಯ್ಬಾ ಉಗ್ರರ ದಾಳಿ ನಟಿ ಸಾವು. 2022-05-26