Breaking News

ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿ ಗುಂಡಿನ ದಾಳಿ.‌ ಘಟನೆ ಮರೆಯುವ ಮುನ್ನವೇ ಇಂದು ರೈಫಲ್ ಹಿಡಿದು ಶಾಲೆಗೆ ಬಂದ ಮತ್ತೊಬ್ಬ ವಿದ್ಯಾರ್ಥಿ

Cnewstv.in / 26.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿ ಗುಂಡಿನ ದಾಳಿ.‌ ಘಟನೆ ಮರೆಯುವ ಮುನ್ನವೇ ಇಂದು ರೈಫಲ್ ಹಿಡಿದು ಶಾಲೆಗೆ ಬಂದ ಮತ್ತೊಬ್ಬ ವಿದ್ಯಾರ್ಥಿ.

ಟೆಕ್ಸಾಸ್ : ನೆನ್ನೆ ಅಮೆರಿಕಾದ ಟೆಕ್ಸಾಸ್ ನ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುಂಡಿನ ದಾಳಿ ಇಡೀ ಅಮೇರಿಕಾ ನಗರವನ್ನೇ ಬೆಚ್ಚಿಬೀಳಿಸಿದೆ. ಇದೇ ಬೆನ್ನಲ್ಲಿ ಇಂದು ಮತ್ತೋರ್ವ ವಿದ್ಯಾರ್ಥಿ ಶಾಲೆಗೆ ರೈಫಲ್ ಹಿಡಿದು ಬಂದಿದ್ದಾರೆ.

ಕ್ಲಿಯರ್ ಬ್ರೂಕ್ ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ಕ್ಯಾಂಪಸ್ ಗೆ ಲೈಫಲ್ ತೆಗೆದುಕೊಂಡು ಹೋಗಿದ್ದಾನೆ ಇದನ್ನು ಗಮನಿಸಿದ ಪೊಲೀಸರು ಅವನನ್ನು ಬಂಧಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಶಾಲೆಯನ್ನು ಲಾಕ್ ಡೌನ್ ಸ್ಥಿತಿಯಲ್ಲಿ ಇರಿಸಲಾಗಿತ್ತು. ನಂತರ ಯಾವುದೇ ಅಪಾಯವಿಲ್ಲ ಎಂದು ಖಾತ್ರಿಯಾದ ನಂತರ ಶಾಲೆಯಲ್ಲಿ ಎಂದಿನಂತೆ ಮುಂದುವರೆಯಿತು.

ಸಾಲ್ವಡೋರ್ ರಾಮೋಸ್ ಎಂಬ 18 ವರ್ಷದ ಯುವಕ ನಿನ್ನ ಪ್ರಾಥಮಿಕ ಶಾಲೆಗೆ ನುಗ್ಗಿ ಮಕ್ಕಳ ಮೇಲೆ ಗುಂಡಿನ ದಾಳಿ ನಡೆಸಿದ. ಪರಿಣಾಮವಾಗಿ 18 ಮಕ್ಕಳು ಸೇರಿದಂತೆ 2 ಶಿಕ್ಷಕರು ಮೃತಪಟ್ಟಿದ್ದರು. ಈ ಘಟನೆಯಿಂದಾಗಿ ಇಡೀ ಟೆಕ್ಸಾಸ್ ನಗರದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿತ್ತು.‌

ಇದನ್ನು ಒದಿ : https://cnewstv.in/?p=9941

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*