ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿದ 18 ವರ್ಷದ ಯುವಕ. 19 ಮಕ್ಕಳ ಹತ್ಯೆ..
Cnewstv.in / 25.05.2022 / ಟಿಕ್ಸಾಸ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿದ 18 ವರ್ಷದ ಯುವಕ. 19 ಮಕ್ಕಳ ಹತ್ಯೆ..
ಟೆಕ್ಸಾಸ್ : ಅಮೇರಿಕಾದ ಟೆಕ್ಸಾಸ್ ನ ಪ್ರಾಥಮಿಕ ಶಾಲೆಯಲ್ಲಿ 18 ವರ್ಷದ ಯುವಕನೊಬ್ಬ ಗುಂಡಿನ ದಾಳಿ ನಡೆಸಿದ್ದು, ಈ ಘಟನೆ ಇಡೀ ಟೆಕ್ಸಾಸ್ ನಗರವನ್ನೇ ಬೆಚ್ಚಿಬೀಳಿಸಿದೆ.
ಸಾಲ್ವಡೋರ್ ರಾಮೊಸ್ ಎಂಬ 18 ವರ್ಷದ ಯುವಕ ಪ್ರಾರ್ಥಮಿಕ ಶಾಲೆಗೆ ನುಗಿ ಮನಬಂದಂತೆ ಗುಂಡು ಹಾರಿಸಿದ್ದಾನೆ. ಪರಿಣಾಮವಾಗಿ 19 ಮಕ್ಕಳು, ಶಿಕ್ಷಕರು ಸೇರಿದಂತೆ ಒಟ್ಟು 22 ಮಂದಿ ಮೃತಪಟ್ಟಿದ್ದಾರೆ.
ತೀವ್ರವಾಗಿ ಗಾಯಗೊಂಡ ಮಕ್ಕಳನ್ನು ಟೆಕ್ಸಾಸ್ ಆಸ್ಪತ್ರೆಗೆ ಹಾಗೂ ಸಾನ್ ಅಂಟೊನೀಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿ ಮಾಡಿದ ಯುವಕನನ್ನು ಪೊಲೀಸರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ಶಾಲೆಯ ಹೊರಗೆ ಪೋಷಕರು ತಮ್ಮ ಮಕ್ಕಳು ಜೀವಂತವಾಗಿ ಹೊರಗೆ ಬರಲಿ ಎಂದು ಪ್ರಾರ್ಥಿಸುತ್ತಾ ನಿಂತಿರುವ ದೃಶ್ಯ ಮನಕಲಕುವಂತಿದೆ. ಇನ್ನು ಈ ಘಟನೆ ಬಗ್ಗೆ ಅಮೆರಿಕ ಅಧ್ಯಕ್ಷರ ಜೋ ಬೈಡೆನ್ ಸಂತಾಪವನ್ನು ಸೂಚಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಈ ರೀತಿ ಟ್ವೀಟ್ ಮಾಡಿದ್ದಾರೆ
” ಈ ರೀತಿಯ ಸಾಮೂಹಿಕ ಗುಂಡಿನ ದಾಳಿಗಳು ಪ್ರಪಂಚದ ಬೇರೆಡೆ ಅಪರೂಪವಾಗಿ ನಡೆಯುತ್ತವೆ. ಈ ಹತ್ಯಾಕಾಂಡದೊಂದಿಗೆ ನಾವು ಬದುಕಲು ಏಕೆ ಸಿದ್ಧರಿದ್ದೇವೆ? ನಾವು ಇದನ್ನು ಏಕೆ ಮಾಡಲು ಬಿಡುತ್ತೇವೆ? ಅದನ್ನು ಎದುರಿಸುವ ಧೈರ್ಯ ನಮ್ಮ ಬೆನ್ನೆಲುಬು ದೇವರ ಹೆಸರಿನಲ್ಲಿ ಎಲ್ಲಿದೆ? ಈ ನೋವನ್ನು ಕ್ರಿಯೆಗೆ ತಿರುಗಿಸುವ ಸಮಯ.”
” ಮಗುವನ್ನು ಕಳೆದುಕೊಳ್ಳುವುದು ಎಂದರೆ ನಿಮ್ಮ ಆತ್ಮದ ತುಂಡನ್ನು ಕಿತ್ತುಹಾಕುವುದು. ಇದು ಎಂದಿಗೂ ಒಂದೇ ಆಗಿರುವುದಿಲ್ಲ. ಮತ್ತು ಇದು ಒಡಹುಟ್ಟಿದವರು, ಅಜ್ಜಿಯರು, ಕುಟುಂಬಗಳು ಮತ್ತು ಸಮುದಾಯಗಳಿಂದ ಹಂಚಿಕೊಂಡ ಭಾವನೆಯಾಗಿದೆ. ಅವರಿಗಾಗಿ ಪ್ರಾರ್ಥಿಸಲು, ಅವರು ಅನುಭವಿಸುವ ಕತ್ತಲೆಯಲ್ಲಿ ಅವರಿಗೆ ಶಕ್ತಿಯನ್ನು ನೀಡಲು ನಾನು ರಾಷ್ಟ್ರವನ್ನು ಕೇಳುತ್ತೇನೆ.”
ಇದನ್ನು ಒದಿ : https://cnewstv.in/?p=9932
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
Texas school fire ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿದ 18 ವರ್ಷದ ಯುವಕ. 19 ಮಕ್ಕಳ ಹತ್ಯೆ.. 2022-05-25
Recent Comments