Breaking News

ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ 75 ರನ್‌ಗಳ ಭರ್ಜರಿ ಗೆಲುವು..

Cnewstv.in / 08.05.2022 / ಪುಣೆ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ 75 ರನ್‌ಗಳ ಭರ್ಜರಿ ಗೆಲುವು..

ಪುಣೆ : ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 75 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ್ದ ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ತಂಡ ಕೋಲ್ಕತಾ ತಂಡದ ದಾಳಿಯ ಹೊರತಾಗಿಯೂ 7 ವಿಕೆಟ್‌ ನಷ್ಟಕ್ಕೆ 176 ರನ್‌ ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ 14.4 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟ್‌ ಆಯಿತು. ಈ ಮೂಲಕ ಲಕ್ನೋ 75 ರನ್‌ಗಳ ಗೆಲುವು ಸಾಧಿಸಿತು.

ಲಕ್ನೋ ಪರ ಆವೇಶ್ ಖಾನ್ ಮತ್ತು ಜೋಸನ್ ಹೋಲ್ಡರ್ ತಲಾ 3 ವಿಕೆಟ್ ಪಡೆಯುವ ಮೂಲಕ ಕೋಲ್ಕತ್ತಾ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಲಕ್ನೋ ಜೈಂಟ್ಸ್‌ 20 ಓವರ್‌, 176/7 (ಡಿ ಕಾಕ್‌ 50, ದೀಪಕ್‌ ಹೂಡಾ 41, ಆಂಡ್ರೆ ರಸೆಲ್‌ 22ಕ್ಕೆ 2). ಕೋಲ್ಕತಾ 14.3 ಓವರ್‌, 101/10(ರಸೆಲ್‌ 45, ನಾರಾಯಣ್‌ 22).

ಐಪಿಎಲ್‌ನಲ್ಲಿ ಹೊಸ ತಂಡವೆನಿಸಿದರೂ, ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು, ಕೋಲ್ಕತಾ ವಿರುದ್ಧ 75 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೊದಲ ಸ್ಥಾನಕ್ಕೇರಿದೆ.

ಇದನ್ನು ಒದಿ‌ : https://cnewstv.in/?p=9726

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*