Cnewstv.in / 04.05.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮ್ಯಾನ್ ಆಫ್ ದಿ ಮ್ಯಾಚ್..
ಮ್ಯಾನ್ ಆಫ್ ದಿ ಮ್ಯಾಚ್’ ಕಥೆ ಅಲ್ಲ ಮಾತುಕತೆಮ್ಯಾನ್ ಆಫ್ ದಿ ಮ್ಯಾಚ್… ಇದು ಕಥೆ ಅಲ್ಲ. ಮಾತುಕತೆ. ಇದರಲ್ಲಿ ಎಲ್ಲವೂ ಇದೆ. ಆದರೆ ಇದು ಶಿಷ್ಟ ಪ್ರಕಾರದ ಸಿನಿಮಾ ಅಲ್ಲ… ಎನ್ನುತ್ತಲೇ ಮಾತಿಗಿಳಿದವರು ನಿರ್ದೇಶಕ ಡಿ. ಸತ್ಯ ಪ್ರಕಾಶ್.
ರಾಮಾ ರಾಮಾ ರೇ… ಒಂದಲ್ಲಾ ಎರಡಲ್ಲಾ… ಜಯನಗರ ಫೋರ್ತ್ ಬ್ಲಾಕ್ ಚಿತ್ರಗಳ ನಂತರ ‘ಮ್ಯಾನ್ ಆಫ್ ದಿ ಮ್ಯಾಚ್’ ಪ್ರಯೋಗಕ್ಕಿಳಿದಿದ್ದಾರೆ. ಈ ಚಿತ್ರ ಮೇ 5ರಂದು ಅಮೆಝಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ.
ಎಲ್ಲವೂ ನೈಜ, ಸಹಜ…
ಒಂದೇ ಸನ್ನಿವೇಶ, ಸೆಟ್‌ನಲ್ಲಿ ಸಿನಿಮಾ ನಡೆಯುತ್ತದೆ. ಸಿನಿಮಾದ ಆಡಿಷನ್‌ಗೆ ಬರುವವರಲ್ಲೇ ಒಂದು ಕತೆ ಹುಟ್ಟಿಕೊಳ್ಳುತ್ತದೆ. ಮಾತು, ಪ್ರೀತಿ ಎಲ್ಲವೂ ಆ ಆವರಣದ ಒಳಗೇ ನಡೆಯುತ್ತದೆ. ಪ್ರೇಕ್ಷಕ ಏನನ್ನು ಕೇಳುತ್ತಾನೋ ಅದೆಲ್ಲವೂ ಇಲ್ಲಿದೆ ಎಂದರು ಸತ್ಯ ಪ್ರಕಾಶ್.
‘ಬಹುತೇಕ ಧ್ವನಿ ಸೆಟ್‌ನಲ್ಲೇ ಧ್ವನಿಮುದ್ರಣವಾಗಿದೆ. ಸಿನಿಮ್ಯಾಟಿಕ್ ತಂತ್ರಗಳನ್ನು ನಿವಾರಿಸಿದ್ದೇವೆ. ಕಥೆ ಹೇಳುವಾಗ ಹಲವು ಉಪಮೆಗಳನ್ನು ಕೊಟ್ಟಿದ್ದೇವೆ. ಹಾಗೆ ನೋಡಿದರೆ ಇದು ನಾಟಕ ಮತ್ತು ಸಿನಿಮಾದ ಮಿಶ್ರಣ’ ಎಂದು ಬಣ್ಣಿಸಿದರು ಸತ್ಯ ಪ್ರಕಾಶ್.
‘ವಿಡಂಬನೆ, ತಮಾಷೆ ಎಲ್ಲವನ್ನೂ ಹೇಳುತ್ತಾ, ಕೊನೆಗೆ ಒಂದು ಮೌಲ್ಯವನ್ನು ತುಂಬುವ ಪ್ರಯತ್ನ ಈ ಚಿತ್ರದಲ್ಲಿದೆ. ಹಾಗೆ ನೋಡಿದರೆ ಸಿದ್ಧಮಾದರಿ ಎನ್ನುವುದು ಈ ಕ್ಷೇತ್ರದಲ್ಲಿ ಇರಬಾರದು. ಅದನ್ನೆಲ್ಲಾ ದಾಟುವ ಪ್ರಯತ್ನ ಮಾಡಿದ್ದೇವೆ’ ಎಂದರು ಅವರು.
ಧರ್ಮಣ್ಣ ಕಡೂರು ಪ್ರತಿಕ್ರಿಯಿಸಿ, ‘ಇಲ್ಲಿ ಜೀವನಕ್ಕೂ ಪಾತ್ರಕ್ಕೂ ವ್ಯತ್ಯಾಸ ಇಲ್ಲ. ಆಡಿಷನ್‌ನಲ್ಲಿ ಹೀಗೆಲ್ಲಾ ನಡೆಯುತ್ತದಾ ಎಂದೆನಿಸುತ್ತದೆ. ನನಗೂ ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೆ ಎಂಬ ಕುತೂಹಲವಿದೆ’ ಎಂದರು.
ಅಥರ್ವ ಪ್ರಕಾಶ್, ಕೆ. ಜಯರಾಮ್, ನಟರಾಜ್, ವಾಸುಕಿ ವೈಭವ್ ಮತ್ತಿತರರು ತಾರಾಗಣದಲ್ಲಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ಸ್ ಸತ್ಯ ಪಿಚ್ಚರ್ಸ್ ಮಯೂರ ಫಿಲಂಸ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣವಾಗಿದೆ
ಇದನ್ನು ಒದಿ : https://cnewstv.in/?p=9683
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.