ಶಿವಮೊಗ್ಗ: ಇಟ್ಟಿಗೆ ತಯಾರು ಮಾಡಲು ನಿರ್ಮಿಸಿದ್ದ ಶೆಡ್ ನಲ್ಲಿಯೇ ನೇಣು ಬಿಗಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶಿವಮೊಗ್ಗ ತಾಲೂಕಿನ ತೋಟದಕೊಪ್ಪ ಗ್ರಾಮದ ಶೆಡ್ ನಲ್ಲಿ ಘಟನೆ ನಡೆದಿದೆ. ಜಾನಕಿರಾಮ್( 34) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಶಿವಮೊಗ್ಗ ತಾಲೂಕಿನ ಉಂಬಳೇಬೈಲು ಗ್ರಾ.ಪಂ ವ್ಯಾಪ್ತಿಯ ಹುರಳಿಹಳ್ಳಿಯ ನಿವಾಸಿಯಾಗಿರುವ ಜಾನಕಿರಾಮ್, ತೋಟದಕೊಪ್ಪದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಟ್ಟಿಗೆ ನಿರ್ಮಿಸುವ ಶೆಡ್ ನಲ್ಲಿ ಸೀರೆ ಬಳಸಿ,ಆತ್ಮಹತ್ಯೆ ಮಾಡಿಕೊಂಡಿದ್ದು, ಹೆಚ್ಚು ಸಾಲ ಮಾಡಿಕೊಂಡಿರುವುದೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ.
ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
