Breaking News

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಎಸ್ಆರ್ಟಿಸಿ ಯಿಂದ ನೂತನ ಬಸ್ ವ್ಯವಸ್ಥೆ

ಶಿವಮೊಗ್ಗ : ತಾಲೂಕಿನ ಸೋಗಾನೆಯಲ್ಲಿರುವ ಶಿವಮೊಗ್ಗ ವಿಮಾನ‌ ನಿಲ್ದಾಣಕ್ಕೆ ನಗರದಿಂದ ಬಸ್ ಸೌಲಭ್ಯ ಇಲ್ಲದೇ ಪರದಾಡುತ್ತಿದ್ದ ಪ್ರಯಾಣಕರಿಗೆ ಕೆಎಸ್ಆರ್ಟಿಸಿ ಇಂದು ಗುಡ್ ನ್ಯೂಸ್ ನೀಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶಿವಮೊಗ್ಗ ವಿಭಾಗವು ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ ಹಾಗೂ ಕಾಚಿನಕಟ್ಟೆಗೆ 2 ನಗರ ಸಾರಿಗೆ ಬಸ್‌ಗಳ ಕಾರ್ಯಾಚರಣೆ ಆರಂಭಿಸುವುದಾಗಿ ತಿಳಿಸಿದೆ.

ಶಿವಮೊಗ್ಗ ಬಸ್ ನಿಲ್ದಾಣದಿಂದ ಬೆಳಗ್ಗೆ 9.45, 10.00, 12.45, 02.00, 03.00 ಮತ್ತು 3.30ಕ್ಕೆ ಅದೇ ರೀತಿ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ/ಕಾಚಿನಕಟ್ಟೆಯಿಂದ ಬೆಳಗ್ಗೆ 10.40, 11.40, 01.30, 02.45, 3.35 ಹಾಗೂ 4.05 ರ ಸಮಯದಲ್ಲಿ ಓಡಾಟ ನಡೆಸಲಾಗುತ್ತಿದ್ದು, ಸಾರ್ವಜನಿಕರು ಈ ಬಸ್‌ಗಳ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಕರಾರಸಾನಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

*