ಐದು ದಿನದಲ್ಲಿ ಬಾಹುಬಲಿ 2 ಚಿತ್ರದ ದಾಖಲೆಯನ್ನು ಬ್ರೇಕ್ ಮಾಡಿದ ‘ಕೆಜಿಎಫ್ ಚಾಪ್ಟರ್ 2’
Cnewstv.in / 18.4.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಬಾಹುಬಲಿ 2 ಚಿತ್ರದ ದಾಖಲೆಯನ್ನು ಬ್ರೇಕ್ ಮಾಡಿದ ‘ಕೆಜಿಎಫ್ ಚಾಪ್ಟರ್ 2’
ನವದೆಹಲಿ : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರ ದಾಖಲೆ ಮೇಲೆ, ದಾಖಲೆಗಳನ್ನು ಬರೆಯುತ್ತಿದ್ದೆ. ಬಾಹುಬಲಿ 2 ಚಿತ್ರದ ರೆಕಾರ್ಡನ್ನು ಕೂಡಾ, ಚಿತ್ರ ತೆರೆಕಂಡ 5 ದಿನಗಳಲ್ಲಿ ಕೆಜಿಎಫ್ ಚಾಪ್ಟರ್ ಟು ಬ್ರೇಕ್ ಮಾಡಿದೆ.
ಕೆಜಿಎಫ್ ಚಾಪ್ಟರ್ 2 ಹಿಂದಿ ವರ್ಷನ್ ಮೊದಲ ನಾಲ್ಕು ದಿನದಲ್ಲಿ 193.99 ಕೋಟಿ ರೂ ಗಳಿಸಿದ್ದು, ಸೋಮವಾರ 200 ಕೋಟಿ ರೂ. ಗಡಿ ದಾಟಲಿದೆ.
ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಬಾಹುಬಲಿ 2 ಚಿತ್ರವು ಬಿಡುಗಡೆಯಾದ ಆರು ದಿನದಲ್ಲಿ 200 ಕೋಟಿ ಕ್ಲಬ್ ಸೇರಿತ್ತು. ಅದರೆ ‘ಕೆಜಿಎಫ್ ಚಾಪ್ಟರ್ 2’ ತೆರೆಕಂಡ ನಾಲ್ಕು ದಿನಗಳಲ್ಲಿ 200 ಕೋಟಿ ಕ್ಲಬ್ ಸೇರಿದೆ. ಈ ಮೂಲಕ ಬಾಹುಬಲಿ 2 ದಾಖಲೆಯನ್ನು ಸಹ ಬ್ರೇಕ್ ಮಾಡಿದೆ.
ಮೊದಲ ದಿನ 53.95 ಕೋಟಿ, ಎರಡನೇ ದಿನ 46.79 ಕೋಟಿ, ಮೂರನೇ ದಿನ 42.90 ಕೋಟಿ ಮತ್ತು ನಾಲ್ಕನೇ ದಿನದಲ್ಲಿ 50.35 ಕೋಟಿ ರೂ ಗಳಿಸುವ ಮೂಲಕ 200 ಕೋಟಿ ಕ್ಲಬ್ ಸೇರಿತ್ತು.
ಇದನ್ನು ಒದಿ : https://cnewstv.in/?p=9464
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
2022-04-18