Cnewstv.in / 13.4.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕಲ್ಲಿದ್ದಲು ಕೊರತೆ, ದೇಶದಲ್ಲಿ ವಿದ್ಯುತ್ ಅಭಾವ ಸಾಧ್ಯತೆ…
ನವದೆಹಲಿ : ದೇಶದಲ್ಲಿ ವಿದ್ಯುತ್ ಅಭಾವ ಉಂಟಾಗುವ ಪರಿಸ್ಥಿತಿ ಎದುರಾಗಬಹುದು ಎಂದು ಅಂದಾಜಿಸಲಾಗಿದೆ. ಏಕೆಂದರೆ ದೇಶದಲ್ಲಿ ಈಗಾಗಲೇ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಕಲ್ಲಿದ್ದಲಿನಿಂದಲೇ ಅಗುತ್ತಿದೆ. ಅದರೆ ಸದ್ಯದ ಪರಿಸ್ಥಿತಿಯಲ್ಲಿ ಸಂಸ್ಕರಣ ಕೇಂದ್ರಗಳಲ್ಲಿ ಕಲ್ಲಿದ್ದಲಿನ ಸಂಗ್ರಹ ಕಡಿಮೆ ಪ್ರಮಾಣದಲ್ಲಿದೆ ಹಾಗಾಗಿ ವಿದ್ಯುತ್ ಉತ್ಪಾದನೆ ಕಡಿಮೆಯಾಗಬಹುದು.
ಕೋವಿಡ್ ನಿಂದ ಉತ್ಪಾದನಾ ಕ್ಷೇತ್ರ ಭಾರೀ ನಷ್ಟವನ್ನು ಅನುಭವಿಸಿ ಈಗ ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ವಿದ್ಯುತ್ ಅಭಾವ ಎದುರಾದರೇ ಮತ್ತೊಂದು ಸಂಕಷ್ಟಕ್ಕೆ ಕಾರಣವಾಗುತ್ತದೆ. ಅಲ್ಲದೆ ಇದರಿಂದ ಸರಕುಗಳ ಉತ್ಪಾದನೆಯ ಮೇಲೆ ಹೊರೆ ಬೀಳುತ್ತದೆ.
ರಾಷ್ಟ್ರೀಯ ಪವರ್ ಪೋರ್ಟಲ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಕಲ್ಲಿದ್ದಲು ಸಂಸ್ಕರಣ ಘಟಕಗಳು 24 ದಿನಗಳಿಗಾಗುವಷ್ಟು ಕಲ್ಲಿದ್ದಲು ಸಂಗ್ರಹ ಹೊಂದಿರಬೇಕು ಆದರೆ ಕಲ್ಲಿದ್ದಲು ಸಂಗ್ರಹದ ಕೊರತೆಯಿರುವುದರಿಂದ ಕೇವಲ 9 ದಿನಗಳಿಗಾಗುವಷ್ಟು ಕಲ್ಲಿದ್ದಲು ಮಾತ್ರ ಇದೆ ಎನ್ನಲಾಗುತ್ತಿದೆ
ವಿದ್ಯುತ್ ಉತ್ಪಾದನಾ ಕ್ಷೇತ್ರಕ್ಕೆ ಮಾತ್ರ ಹೊಡೆತ ಬಿದ್ದಿಲ್ಲ. ಕಳೆದ ವರ್ಷದ ಆಗಸ್ಟ್-ಅಕ್ಟೋಬರ್ ಅವಧಿಯಲ್ಲಿ, ದೇಶದ ಹೆಚ್ಚಿನ ವಿದ್ಯುತ್ ಸ್ಥಾವರಗಳು ನಿರ್ಣಾಯಕ ಸ್ಟಾಕ್ ಮಟ್ಟಗಳು ಮತ್ತು ಕಲ್ಲಿದ್ದಲಿನ ತೀವ್ರ ಕೊರತೆಯನ್ನು ವರದಿ ಮಾಡಿದ್ದವು.
ಇದನ್ನು ಒದಿ : https://cnewstv.in/?p=9398
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv