Cnewstv.in / 11.4.2022 / ಗುಜರಾತ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ರಾಸಾಯನಿಕ ಕಾರ್ಖಾನೆಯ ರಿಯಾಕ್ಟರ್ ನಲ್ಲಿ ಸ್ಫೋಟ, 6 ಮಂದಿ ಕಾರ್ಮಿಕರ ಸಾವು.
ಗುಜರಾತ್ : ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಇಂದು ಬೆಳಗ್ಗೆ ಸ್ಫೋಟ ಸಂಭವಿಸಿದ್ದು ಆರು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ.
ಗುಜರಾತ್ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ದ್ರಾವಕ ಬಟ್ಟಿ ಇಳಿಸುವ ಪ್ರಕ್ರಿಯೆ ವೇಳೆ ರಿಯಾಕ್ಟರ್ ನಲ್ಲಿ ಏಕಾಏಕಿ ಸ್ಪೋಟವಾಗಿದೆ. ಇದರಿಂದ ರಿಯಾಕ್ಟರ್ ಹತ್ತಿರವಿದ್ದ ಆರು ಜನ ಕಾರ್ಮಿಕರು ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಆರು ಜನ ಕಾರ್ಮಿಕರನ್ನು ಹೊರತುಪಡಿಸಿ ಇನ್ನಾರಿಗೂ ಯಾವುದೇ ರೀತಿಯಾದಂತಹ ತೊಂದರೆಯಾಗಿಲ್ಲ. ಇನ್ನೂ 6 ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭರೂಚ್ ಪೋಲಿಸ್ ಎಸ್ ಪಿ ಲೀನಾ ತಿಳಿಸಿದ್ದಾರೆ.
ಇದನ್ನು ಒದಿ : https://cnewstv.in/?p=9365
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv