Breaking News

ದಿನೇಶ್‌ ಕಾರ್ತಿಕ್‌ ಅತ್ಯುತ್ತಮ ಕ್ರಿಕೆಟ್‌ ಆಟಗಾರ. ಅವರು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಬೇಕೆನ್ನುವುದು ನನ್ನ ಅಲೋಚನೆಯಾಗಿದೆ : ಆರ್‌ಸಿಬಿ ನಾಯಕ ಫಾಡು ಪ್ಲೆಸಿಸ್‌

Cnewstv.in / 7.4.2022 / ಮುಂಬಯಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ದಿನೇಶ್‌ ಕಾರ್ತಿಕ್‌ ಅತ್ಯುತ್ತಮ ಕ್ರಿಕೆಟ್‌ ಆಟಗಾರ. ಅವರು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಬೇಕೆನ್ನುವುದು ನನ್ನ ಅಲೋಚನೆಯಾಗಿದೆ : ಆರ್‌ಸಿಬಿ ನಾಯಕ ಫಾಡು ಪ್ಲೆಸಿಸ್‌

ಮುಂಬಯಿ: ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ನೆನ್ನೆ ನಡೆದ ಪಂದ್ಯದಲ್ಲಿ ದಿನೇಶ್‌ ಕಾರ್ತಿಕ್‌ ಅದ್ಭುತ ಆಟದ ಪ್ರದರ್ಶನ ನೀಡಿದ್ದಾರೆ. ದಿನೇಶ್‌ ಅವರ ಮ್ಯಾಚ್‌ ವಿನ್ನಿಂಗ್‌ ಪ್ರಯತ್ನದಿಂದ ಅವರು ಮತ್ತೆ ಭಾರತೀಯ ತಂಡಕ್ಕೆ ಮರಳುವ ಪ್ರಯತ್ನ ಮಾಡಿದ್ದಾರೆ ಎಂದು ರಾಯಲ್‌ ಚಾಲೆಂಜರ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ಫಾ ಡು ಪ್ಲೆಸಿಸ್‌ ಹೇಳಿದ್ದಾರೆ.

ದಿನೇಶ್‌ ಕೇವಲ 23 ಎಸೆತಗಳಿಂದ ಅಜೇಯ 44 ರನ್‌ ಸಿಡಿಸಿದ್ದರಿಂದ ಆರ್‌ಸಿಬಿ ಅಮೋಘ ಗೆಲುವು ಸಾಧಿಸುವಂತಾಯಿತು. ಒಂದು ಹಂತದಲ್ಲಿ ಬ್ಯಾಟಿಂಗ್‌ ಕುಸಿತ ಕಂಡಿದ್ದ ಆರ್‌ಸಿಬಿ ತಂಡವನ್ನು ದಿನೇಶ್‌ ತನ್ನ ಅಮೋಘ ಆಟದಿಂದ ಮೇಲಕ್ಕೆತ್ತಿದ್ದರು. ಅವರಿಗೆ ಶಾಬಾಜ್‌ ಅಹ್ಮದ್‌ ಉತ್ತಮ ಬೆಂಬಲ ನೀಡಿದ್ದರು.

ಅವರು ಅತ್ಯುತ್ತಮ ಕ್ರಿಕೆಟ್‌ ಆಡುತ್ತಿದ್ದಾರೆ. ಅವರು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಬೇಕೆನ್ನುವುದು ನನ್ನ ಅಲೋಚನೆಯಾಗಿದೆ ಎಂದು ಪ್ಲೆಸಿಸ್‌ ತಿಳಿಸಿದರು.

ಡಿ.ಕೆ. ನಮ್ಮ ಸಾಮರ್ಥ್ಯವನ್ನು ಹೊರಗೆಡಹಲು ಒಳ್ಳೆಯ ನಿರ್ವಹಣೆಯ ಅಗತ್ಯವಿದೆ. ದಿನೇಶ್‌ ಕಾರ್ತಿಕ್‌ ಬಲುದೊಡ್ಡ ಒಳ್ಳೆಯ ನಿರ್ವಹಣೆಯ ವ್ಯಕ್ತಿಯಾಗಿದ್ದಾರೆ ಮತ್ತು ಅವರಿಂದ ಯಾವಾಗಲೂ ಒಳ್ಳೆಯ ನಿರ್ವಹಣೆಯನ್ನು ನಿರೀಕ್ಷಿಸಬಹುದು. ಎಷ್ಟೇ ಒತ್ತಡವಿದ್ದರೂ ಶಾಂತ ರೀತಿಯಲ್ಲಿ ಅವರು ಆಡುವ ಮೂಲಕ ಇತರರನ್ನು ಹುರಿದುಂಬಿಸುತ್ತಿದ್ದಾರೆ ಎಂದು ಪ್ಲೆಸಿಸ್‌ ಹೇಳಿದರು.

ಹಲವು ಬಾರಿ ರಾಷ್ಟ್ರೀಯ ತಂಡಕ್ಕೆ ಮರಳಿರುವ ಕಾರ್ತಿಕ್‌ 2019ರ ವಿಶ್ವಕಪ್‌ನಲ್ಲಿ ಭಾರತ ಪರ ಕೊನೆಯದಾಗಿ ಆಡಿದ್ದರು. ನಂಬಿಗಸ್ಥ ಫಿನಿಶರ್‌ ಆಗಿ ಭಾರತೀಯ ತಂಡಕ್ಕೆ ಮರಳಲು ಅವರು ಬಯಸಿದ್ದಾರೆ.

ಇದನ್ನು ಒದಿ : https://cnewstv.in/?p=9282

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*