Breaking News

ರೇವಾ ಪಾರ್ಟಿ : ಡ್ರಗ್ಸ್ ವಿರುದ್ಧ ಅಭಿಯಾನದಲ್ಲಿ ಹಾಡು ಹೇಳಿದ ರಾಹುಲ್ ಥೀಮ್, ತೆಲುಗು ರಿಯಾಲಿಟಿ ಶೋ ಬಿಗ್ ಬಾಸ್ ವಿಜೇತ ರಾಹುಲ್ ಸಿಪ್ಲಿಗುಂಜ್, ಸೇರಿದಂತೆ 142 ಮಂದಿ ಸೆಲೆಬ್ರಿಟಿಗಳು ಆರೆಸ್ಟ್.‌

Cnewstv.in / 4.4.2022 / ಹೈದರಾಬಾದ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ರೇವಾ ಪಾರ್ಟಿ : ಡ್ರಗ್ಸ್ ವಿರುದ್ಧ ಅಭಿಯಾನದಲ್ಲಿ ಹಾಡು ಹೇಳಿದ ಸೇರಿದಂತೆ 142 ಮಂದಿ ಸೆಲೆಬ್ರಿಟಿಗಳು ಆರೆಸ್ಟ್.‌

ಹೈದರಾಬಾದ್ : ಟಾಸ್ಕ್ ಪೋಸ್ ಪೊಲೀಸರ ತಂಡವು ಭಾನುವಾರ ಬೆಳಗಿನ ಜಾವ ಹೋಟೆಲೊಂದರ ಮೇಲೆ ದಾಳಿ ಮಾಡಿದ್ದು, VIP ಗಳು, ನಟರ ಮಕ್ಕಳು, ರಾಜಕಾರಣಿಗಳ ಮಕ್ಕಳು ಸೇರಿದಂತೆ ಸುಮಾರು 142 ಜನರನ್ನು ಅರೆಸ್ಟ್ ಮಾಡಲಾಗಿದೆ.

ಬಂಜಾರಾ ಹಿಲ್ಸ್ ನಾ ಪಂಚತಾರಾ ಹೋಟೆಲ್ ನಾ ಪಬ್ ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯ ಮೇಲೆ ದಾಳಿ ಮಾಡಿದ ಪೊಲೀಸರು, ಕೊಕೇನ್ ನಂತಹ ನಿಷೇದ ಪದಾರ್ಥಗಳನ್ನು ವಶಕ್ಕೆ ಪಡೆದಿದ್ದಾರೆ.‌

ಬಂಧಿತರಲ್ಲಿ ನಟ ನಾಗಬಾಬು ಅವರ ಪುತ್ರಿ, ಮೆಗಾಸ್ಟಾರ್ ಚಿರಂಜೀವಿ ಅವರ ಸೊಸೆಯೂ ಆಗಿರುವ ನಿಹಾರಿಕಾ ಕೊನಿಡೇಲಾ, ಗಾಯಕ ಮತ್ತು ಬಿಗ್ ಬಾಸ್ ತೆಲುಗು ರಿಯಾಲಿಟಿ ಶೋ ವಿಜೇತ ರಾಹುಲ್ ಸಿಪ್ಲಿಗುಂಜ್ ಕೂಡ ಸೇರಿದ್ದಾರೆ. ಫೆಬ್ರವರಿ 12 ರಂದು ಹೈದರಾಬಾದ್ ಪೊಲೀಸರು ಡ್ರಗ್ಸ್ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿದಾಗ ರಾಹುಲ್ ಥೀಮ್ ಹಾಡನ್ನು ಹಾಡಿದ್ದರು. ಆದರೆ ಅವರನೇ ಪೋಲಿಸರು ಈಗ ಡ್ರಗ್ಸ್ ಕೇಸ್ ನಲ್ಲಿ ಅರೆಸ್ಟ್ ಮಾಡಿದ್ದಾರೆ.

ಇನ್ನು ಪಾರ್ಟಿಯಲ್ಲಿ ಬಂಧಿತರಾಗಿದ್ದ ಉನ್ನತ ವ್ಯಕ್ತಿಗಳ ಮಕ್ಕಳಿಗೂ ಪಾರ್ಟಿಗೂ ಯಾವುದೇ ರೀತಿಯಾದಂತಹ ಸಂಬಂಧವಿಲ್ಲ ಎಂಬ ವಿಡಿಯೋಗಳನ್ನ ಹಾಗೂ ಹೇಳಿಕೆಗಳನ್ನು ನೀಡುತ್ತಿದ್ದಾರೆ.‌

ಇದನ್ನು ಒದಿ : https://cnewstv.in/?p=9260

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*