Cnewstv.in / 4.4.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
XE ಕೊರೊನಾ ಹೊಸ ರೂಪಾಂತರಿ ವೈರಸ್ ಪತ್ತೆ..
ನವದೆಹಲಿ : ಕೊರೊನಾ ರೂಪಾಂತರಿಗಳಾಗಿರುವ BA1 ಹಾಗೂ BA2 ಸಮ್ಮಿಳನದಿಂದ ಹೊಸ XE ವೈರಸ್ ಗಳು ಲಂಡನ್ ನಲ್ಲಿ ಪತ್ತೆಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಈ ಬಗೆ ಎಚ್ಚರಿಕೆಯನ್ನು ನೀಡಿದ್ದು, ಇದು ಒಮಿಕ್ರಾನ್ ರೂಪಾಂತರಿ ಗಿಂತ ಹೆಚ್ಚು ಪ್ರಭಾವಶಾಲಿಯಾಗಿದೆ ಮತ್ತು ಹತ್ತು ಪಟ್ಟು ಹೆಚ್ಚು ವೇಗವಾಗಿ ಹರಡಲಿದೆ ಎಂದು WHO ಅಧ್ಯಯನದಲ್ಲಿ ತಿಳಿಸಲಾಗಿದೆ.
ಏಪ್ರಿಲ್ 2ರವರೆಗೂ 637 ಹೊಸ XE ಪ್ರಕರಣಗಳು ಪತ್ತೆಯಾಗಿವೆ. ಇವುಗಳಲ್ಲಿ ಹೆಚ್ಚಿನ ಪ್ರಕರಣಗಳು ಇಂಗ್ಲೆಂಡ್‌ನ ಪೂರ್ವ ಭಾಗ, ಲಂಡನ್ ಮತ್ತು ಆಗ್ನೇಯ ಭಾಗದಲ್ಲಿ ಪತ್ತೆಯಾಗಿವೆ.
XE ವೈರಸ್ ನ ಲಕ್ಷಣಗಳು ಸ್ಪಷ್ಟವಾಗಿ ಯಾವುದು ಎಂದು ಇದುವರೆಗೂ ಪತ್ತೆಯಾಗಿಲ್ಲ. ಅದರೆ ಜನವರಿಯಲ್ಲಿ ನಡೆಸಲಾಗಿದ್ದ 600 ಮಾದರಿಗಳ ಅಧ್ಯಯನದಲ್ಲಿ ಇದು ಬೇಗ ಹರಡುತ್ತದೆ ಎಂಬ ವಿಷಯ ಬೆಳಕಿಗೆ ಬಂದಿದೆ.
ಇದನ್ನು ಒದಿ : https://cnewstv.in/?p=9257
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments