Cnewstv.in / 3.4.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಎಎಪಿ ಪಕ್ಷಕ್ಕೆ “ಒಂದು ಅವಕಾಶ” ನೀಡಿ. ನಾನು ಗುಜರಾತನ್ನು ಗೆಲ್ಲಿಸಲು ಬರೆದಿದ್ದೇನೆ. ಗುಜರಾತ್ ನಲ್ಲಿ ಬ್ರಷ್ಟಾಚಾರ ಕೊನೆಗಾಣಬೇಕು – ಅರವಿಂದ್ ಕೇಜ್ರಿವಾಲ್.
ನವದೆಹಲಿ : ಪಂಜಾಬ್ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ, ಅರವಿಂದ್ ಕೇಜ್ರಿವಾಲ್ ಅಹಮದಾಬಾದ್‌ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದರು ಮತ್ತು ಎಎಪಿ ತಿರಂಗ ಯಾತ್ರೆ ರೋಡ್‌ಶೋನಲ್ಲಿ ಭಾಗವಹಿಸಿದರು.
ನಂತರ ಮಾತನಾಡಿದ ಅರವಿಂದ್ ಕೇಜ್ರಿವಾಲ್ ” ನಾವು ಯಾವುದೇ ಪಕ್ಷವನ್ನು ಟೀಕಿಸಲು ಬಂದಿಲ್ಲ, ಬಿಜೆಪಿ ಸೋಲಿಸಲು ಬಂದಿಲ್ಲ ಅಥವಾ ಕಾಂಗ್ರೆಸ್ ಸೋಲಿಸಲು ಬಂದಿಲ್ಲ. ನಾನು ಗುಜರಾತ್ ಗೆಲ್ಲಿಸಲು ಬಂದಿದ್ದೇನೆ. ಗುಜರಾತಿನಲ್ಲಿ ಭ್ರಷ್ಟಾಚಾರ ಕೊನೆಗಾಣಿಸಬೇಕು. ಕಳೆದ 25 ವರ್ಷಗಳಿಂದ ಗುಜರಾತಿನಲ್ಲಿ ಬಿಜೆಪಿ ಅಧಿಕಾರದಲ್ಲಿದರೂ ಭ್ರಷ್ಟಾಚಾರ ಕೊನೆಗೊಳಿಸಲು ಸಾಧ್ಯವಾಗಿಲ್ಲ.
ಪಂಜಾಬ್ ಹಾಗೂ ದೆಹಲಿಯಲ್ಲಿ ಜನರು ಅವಕಾಶ ನೀಡಿದಂತೆ ಆಮ್ ಆದ್ಮಿ ಪಕ್ಷಕ್ಕೆ ಒಮ್ಮೆ ಅವಕಾಶ ನೀಡಿ. ಒಂದು ವೇಳೆ ನಮ್ಮ ಅಡಳಿತ ಇಷ್ಟವಾಗದಿದ್ದರೆ ಮುಂದಿನ ಬಾರಿ ನಮ್ಮನ್ನ ಬದಲಾಯಿಸಿ ಎಂದರು.”
ಇದನ್ನು ಒದಿ : https://cnewstv.in/?p=9245
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv