Cnewstv.in / 29.03.2022 / ಉತ್ತರ ಪ್ರದೇಶ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಬಿಜೆಪಿ ಬೆಂಬಲಿಸಿ, ವಿಜಯೋತ್ಸವ ಆಚರಿಸಿದಕ್ಕಾಗಿ ಮುಸ್ಲಿಂ ಯುವಕನ ಹತ್ಯೆ.
ಉತ್ತರಪ್ರದೇಶ : ಮುಸ್ಲಿಂ ಯುವಕನೊಬ್ಬ ಬಿಜೆಪಿಯನ್ನು ಬೆಂಬಲಿಸಿ, ವಿಜಯೋತ್ಸವ ಆಚರಿಸಿದಕ್ಕಾಗಿ ಆತನ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಖುಷಿನಗರದ ಮುಸ್ಲಿಂ ಯುವಕ ಬಾಬರ್ ಅಲಿ(25) ಎಂಬುವವನು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ, ಪ್ರಚಾರ ಮಾಡಿದ. ಹಾಗೂ ಮಾರ್ಚ್ 10ರಂದು ಫಲಿತಾಂಶ ಬಂದ ನಂತರ ಸುತ್ತಮುತ್ತಲಿನ ಮನೆಯವರಿಗೆ ಸಿಹಿ ಹಂಚಿ, ವಿಜಯೋತ್ಸವ ಆಚರಿಸಿದ್ದ.
ಈ ಹಿನ್ನಲೆಯಲ್ಲಿ ಮಾರ್ಚ್ 26ರಂದು ನೆರೆಹೊರೆಯವರು ಆತನ ಮೇಲೆ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಬಾಬರ್ ಅಲಿಯನ್ನು ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಾರ್ಚ್ 27ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಬಿಜೆಪಿಯನ್ನು ಬೆಂಬಲಿಸಿದ್ದಕ್ಕಾಗಿ ಅಕ್ಕಪಕ್ಕದ ಮನೆಯವರು ಈ ಹಿಂದೆಯೇ ಪದೇ ಪದೇ ಎಚ್ಚರಿಕೆಯನ್ನು ಕೊಟ್ಟಿದ್ದರು ಎಂದು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.
ಈ ಕೊಲೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತನಿಖೆಗೆ ಆದೇಶಿಸಿದ್ದಾರೆ. ಹಾಗೂ ಮೃತ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ
ಇದನ್ನು ಒದಿ : https://cnewstv.in/?p=9183
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv