Breaking News

ಗುಜರಾತ್ ನಲ್ಲಿ ನಿರ್ಮಾಣವಾಗಿದೆ ದೇಶದ ಮೊದಲ “ಉಕ್ಕಿನ ರಸ್ತೆ”..

Cnewstv.in / 27.03.2022 / ಗುಜರಾತ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಗುಜರಾತ್ ನಲ್ಲಿ ನಿರ್ಮಾಣವಾಗಿದೆ ದೇಶದ ಮೊದಲ “ಉಕ್ಕಿನ ರಸ್ತೆ”..

ಗುಜರಾತ್ : ಉಕ್ಕಿನ ತ್ಯಾಜ್ಯವನ್ನು ಬಳಸಿಕೊಂಡು ಗುಜರಾತ್ ನ ಸೂರತ್ ನಲ್ಲಿ ರಸ್ತೆಯನ್ನು ನಿರ್ಮಾಣ ಮಾಡಿದ್ದು, ಇದು ದೇಶದ ಮೊದಲ ಉಕ್ಕಿನ ರಸ್ತೆಯಾಗಿದೆ.

ದೇಶಾದ್ಯಂತ ಪ್ರತಿವರ್ಷವೂ ಒಂದು ದಶಲಕ್ಷ ಟನ್ ಗಳಷ್ಟು ಉಕ್ಕಿನ ತ್ಯಾಜ್ಯವು ವ್ಯರ್ಥವಾಗಿ ಭೂಮಿಯಡಿ ಸೇರುತ್ತದೆ. ಅದನ್ನ ಸಂಪನ್ಮೂಲ ವನ್ನಾಗಿ ಬಳಸಿಕೊಂಡು ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಈ ಯೋಜನೆಯ ಸಂಶೋಧನಾ ಭಾಗವಾಗಿ ಮೊದಲ ಹಂತದಲ್ಲಿ ಗುಜರಾತ್‌ ನ ಸೂರತ್ ನಗರದ ಹಜಿರಾ ಕೈಗಾರಿಕಾ ವಲಯದಲ್ಲಿ ಸುಮಾರು 1 KM ಉದ್ದದ ಹಾಗೂ 6 ಲೇನ್ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ.

ಸಿಎಸ್ ಆರ್ ಐ ಪ್ರಕಾರ ರಸ್ತೆಯ ದಪ್ಪವೂ ಶೇ.30ರಷ್ಟು ಕಡಿಮೆಯಾಗಿದೆ. ಇದನ್ನು ಶೇ 100ರಷ್ಟು ಸ್ಟೀಲ್ ವಸ್ತುಗಳ ಸಂಸ್ಕರಣೆ ಮತ್ತು ಸಾಮಾನ್ಯ ವಸ್ತುಗಳ ಉಪ ಉತ್ಪನ್ನಗಳನ್ನು ಬಳಸಿ ಮಾಡಲಾಗಿದೆ.

ಸಿಎಸ್‌ಐಆರ್‌ ಮತ್ತು ಕೇಂದ್ರೀಯ ರಸ್ತೆ ಸಂಶೋಧನಾ ಸಂಸ್ಥೆಗಳು ರಾಷ್ಟ್ರೀಯ ಉಕ್ಕು ಸಚಿವಾಲಯದ ಮತ್ತು ನೀತಿ ಆಯೋಗದ ಹಾಗೂ ಭಾರತ ಸರ್ಕಾರದ ತ್ಯಾಜ್ಯದಿಂದ ಆರೋಗ್ಯ ಮತ್ತು ಸ್ವಚ್ಛ ಭಾರತ ಆಂದೋಲನದ ಭಾಗವಾಗಿಯೂ ಈ ಯೋಜನೆ ಸಿದ್ಧವಾಗಿದೆ.

ಈ ಹೊಸ ವಿನ್ಯಾಸದ ರಸ್ತೆಗಳು ಇತರ ರಸ್ತೆಗಳಿಗಿಂತಲೂ ಹೆಚ್ಚುಕಾಲ ಬಾಳಿಕೆ ಬರುತ್ತದೆ ಹಾಗೂ ಮಳೆಗಾಲದಲ್ಲಿ ಉಂಟಾಗುವ ಹಾನಿಯನ್ನು ತಪ್ಪಿಸುತ್ತದೆ. ಪ್ರಯೋಗಿಕ ಸಂಶೋಧನೆಯಲ್ಲಿ ಯಶಸ್ಸು ಕಂಡರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣಗಳಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದು.

ಇದನ್ನು ಒದಿ : https://cnewstv.in/?p=9170

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*