Cnewstv.in / 26.03.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ರಸ್ತೆಪಕ್ಕ ಬಿದ್ದಿದ್ದ ಟ್ರಾವೆಲ್ ಬ್ಯಾಗಿನ ಒಳಗೆ ಇತ್ತು ಯುವಕನ ಕೊಳೆತ ಮೃತದೇಹ….
ನವದೆಹಲಿ : ಇಂದು ಬೆಳಗ್ಗೆ ರಸ್ತೆ ಪಕ್ಕ ಬಿದ್ದಿದ್ದ ಟ್ರಾವೆಲ್ ಬ್ಯಾಗ್ ಓಪನ್ ಮಾಡಿದ ಪೊಲೀಸರಿಗೆ ಶಾಕ್ ಅಗಿತ್ತು. ಏಕೆಂದರೆ ಟ್ರಾವೆಲ್ ಬ್ಯಾಗ್ ಒಳಗಿದ್ದದು ಯುವಕನ ಕೊಳೆತ ಮೃತದೇಹ.
ವೈ – ಬಾಕ್ಲ್ ಮಂಗೋಲ್ ಪುರಿ ರಸ್ತೆಯ ಎದುರು ನೇರಳೆಬಣ್ಣದ ಟ್ರಾವೆಲ್ ಬ್ಯಾಗ್ ಒಂದು ಅನುಮಾನಾಸ್ಪದವಾಗಿ ಬಿದ್ದಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿಯನ್ನು ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಯುವಕನ ಕುತ್ತಿಗೆಯನ್ನು ಸೀಳಿ ಬ್ಯಾಗಿನೊಳಗೆ ತುಂಬಿಸಲಾಗಿದೆ ಎಂದು ತಿಳಿದುಬಂದಿದೆ.
ನಂತರ ಯುವಕನ ಗುರುತು ಪತ್ತೆಗಾಗಿ ಹತ್ತಿರದ ಠಾಣೆಗಳಲ್ಲಿ ಕಾಣೆಯಾದವರ ದಾಖಲಾತಿಗಳನ್ನು ಪರಿಶೀಲಿಸಿದಾಗ, ಕೊಲೆಯಾಗಿರುವ ಯುವಕ ರೋಹಿನಿ ಸೆಕ್ಟರ್ 1ರ ನಿವಾಸಿ, 17 ವರ್ಷದ ಯುವಕ ಎಂದು ತಿಳಿದುಬಂದಿದೆ. ಯುವಕ ಕಾಣೆಯಾಗಿದ್ದಾರೆ ಎಂಬ ದೂರಿನ ಮೇಲೆ ದಕ್ಷಿಣ ರೋಹಿಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಯುವಕ ಇಂದು ಕೊಳೆತ ಸ್ಥಿತಿಯಲ್ಲಿ ದೊರೆತಿದ್ದಾನೆ.
ಇದನ್ನು ಒದಿ : https://cnewstv.in/?p=9157
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments