Cnewstv.in / 25.02.2022 / ಕೈವ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ರಷ್ಯಾ- ಉಕ್ರೇನ್ ಯುದ್ಧ : ಮೊದಲ ದಿನವೇ ಉಕ್ರೇನ್ ಸೈನಿಕರು, ನಾಗರಿಕರು ಸೇರಿ 137 ಮಂದಿ ಸಾವು.
ಕೈವ್ : ರಷ್ಯಾ- ಉಕ್ರೇನ್ ಯುದ್ಧದ ಮೊದಲ ದಿನವೇ ಉಕ್ರೇನ್ ಸೈನಿಕರು, ನಾಗರಿಕರು ಸೇರಿ 137 ಮಂದಿ ಸಾವನಪ್ಪಿದ್ದು, ನೂರಾರು ಮಂದಿಗೆ ಗಾಯಗೊಂಡಿದ್ದಾರೆ.
ಉಕ್ರೇನ್ ವಿರುದ್ಧ ಪೂರ್ಣ ಪ್ರಮಾಣದಲ್ಲಿ ದಾಳಿ ಆರಂಭಿಸಿರುವ ರಷ್ಯಾ, ತನ್ನ ವಾಯು, ಕ್ಷಿಪಣಿ ದಾಳಿಯೊಂದಿಗೆ ಉಕ್ರೇನ್ ನ ಉತ್ತರ,ಪೂರ್ವ, ದಕ್ಷಿಣದ ಗಡಿಯುದ್ದಕ್ಕೂ ದಾಳಿ ನಡೆಸುತ್ತಿದ್ದು, ಉಕ್ರೇನ್ ಸೇನೆಯ ಟ್ಯಾಂಕರ್ ಮತ್ತಿತರ ಮಿಲಿಟರಿ ಸೌಲಭ್ಯಗಳನ್ನು ನಾಶಪಡಿಸುತ್ತಿದೆ.
ರಷ್ಯಾ ದಾಳಿ ಆರಂಭಿಸಿದಾಗಿನಿಂದ ಈವರೆಗೂ ಸೈನಿಕರು, ನಾಗರಿಕರು ಸೇರಿದಂತೆ 137 ಜನರು ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇಂದು ಬೆಳಗ್ಗೆ ವೀಡಿಯೊ ಭಾಷಣದಲ್ಲಿ ತಿಳಿಸಿದ್ದಾರೆ.
ಇನ್ನು ಮೃತ ಸೈನಿಕರನ್ನು ಹೀರೋಗಳು ಎಂದು ಕರೆದಿರುವ ಅವರು, ದಾಳಿಯಲ್ಲಿ ನೂರಾರು ಮಂದಿ ಸೈನಿಕರು ಗಾಯಗೊಂಡಿದ್ದಾರೆ. ಮಿಲಿಟರಿ ಮೇಲೆ ಮಾತ್ರ ದಾಳಿ ಮಾಡುವುದಾಗಿ ಹೇಳಿದ್ದ ರಷ್ಯಾ ನಾಗರಿಕ ತಾಣಗಳ ಮೇಲೂ ಸಹ ದಾಳಿ ನಡೆಸುತ್ತಿದೆ ಎಂದು ಹೇಳಿದ್ದಾರೆ. ರಷ್ಯಾ ಸೇನೆ ಜನರನ್ನು ಕೊಲ್ಲುತ್ತಿದೆ ಮತ್ತು ಶಾಂತಿಯುತ ನಗರಗಳನ್ನು ಮಿಲಿಟರಿ ಗುರಿಗಳಾಗಿ ಪರಿವರ್ತಿಸುತ್ತಿದೆ. ಇದು ರಷ್ಯಾದ ದೊಡ್ಡ ಮೋಸ, ಎಂದಿಗೂ ಇದನ್ನು ಕ್ಷಮಿಸುವುದಿಲ್ಲ ಎಂದು ಝೆಲೆನ್‌ಸ್ಕಿ ಆಕ್ರೋಶ ಹೊರಹಾಕಿದ್ದಾರೆ.
ಇಂದು ಮುಂಜಾನೆ ಉಕ್ರೇನ್ ರಾಜಧಾನಿ ಕೈವ್ ನ ವಿವಿಧ ಕಡೆಗಳಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗದೆ ನಗರದಲ್ಲಿನ 3 ಮಿಲಿಯನ್ ಜನರು ಒಳಗಡೆಯೇ ಸೇರಿದ್ದಾರೆ. ರಷ್ಯಾದ ಆಕ್ರಮಣ ಭೀತಿಯಿಂದ ಮೆಟ್ರೋ ನಿಲ್ದಾಣದ ಅಂಡರ್ ಗ್ರೌಂಡ್ ಒಳಗಡೆಯೇ ಆಶ್ರಯ ಪಡೆದಿದ್ದಾರೆ. ಪ್ರತಿಯೊಬ್ಬರು ತಮ್ಮ ಬ್ಯಾಗ್ ನಲ್ಲಿ ಔಷಧ ಮತ್ತು ದಾಖಲೆಯಂತಹ ಅಗತ್ಯತೆಗಳನ್ನು ಇಟ್ಟುಕೊಳ್ಳುವಂತೆ ಕೈವ್ ಮೇಯರ್ ವಿಟಲಿ ಕ್ಲಿಟ್ಸ್ ಕೋ ತಿಳಿಸಿದ್ದಾರೆ.
ಇದನ್ನು ಒದಿ : https://cnewstv.in/?p=8712
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments