Cnewstv.in / 24.02.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ರಷ್ಯಾ ಉಕ್ರೇನ್ ಬಿಕ್ಕಟ್ಟು : ಗಗನಕ್ಕೇರಿದ ತೈಲ ಬೆಲೆ.
ನವದೆಹಲಿ : ಉಕ್ರೇನ್ ಮೇಲೆ ರಷ್ಯಾ ಸೇನಾ ದಾಳಿ ನಡೆಸುತ್ತಿರುವ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಗಗನಕ್ಕೇರಿದೆ.
ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಉಕ್ರೇನ್‍ಗೆ ಪತ್ರ ಕಳುಹಿಸಿದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಏರಿಕೆಯಾಗಿದ್ದು 100 ಡಾಲರ್ ಹತ್ತಿರ ಬಂದಿದೆ.
ಬ್ರೆಂಟ್ ಕಚ್ಚಾ ತೈಲದ ದರ ಬ್ಯಾರೆಲ್‌ಗೆ 3.48 ಡಾಲರ್ ಏರಿಕೆಯಾಗಿ, 98.97 ಡಾಲರ್‌ಗೆ ಬಂದು ಮುಟ್ಟಿದೆ. 2014ರ ಬಳಿಕ ಇಲ್ಲಿಯವರೆಗೆ ತೈಲ ಬೆಲೆ 100ರ ಗಡಿ ದಾಟಿಲ್ಲ. ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ನಡೆಸುವ ಸಾಧ್ಯತೆ ಹೆಚ್ಚಿದ್ದು, ಇದರಿಂದ ಕಚ್ಚಾತೈಲ ಪೂರೈಕೆಗೆ ಅಡ್ಡಿಯಾಗುವ ಸಾಧ್ಯತೆಯೂ ಇದೆ
ನವೆಂಬರ್ 4 ರಿಂದ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿತ್ತು. ಭಾರತದಲ್ಲಿ ಸದ್ಯ ತೈಲಬೆಲೆ ಏರಿಕೆಯಾಗಿಲ್ಲವಾದರೂ ಜಾಗತಿಕ ಮಟ್ಟದಲ್ಲಿ ತೈಲಬೆಲೆ ಏರಿಕೆಯಾಗಿರುವುದರಿಂದ ಭಾರತದಲ್ಲೂ ಬೆಲೆ ಏರಿಸುವುದು ಅನಿವಾರ್ಯ.
ರಷ್ಯಾವು ಪ್ರಪಂಚದ ಎರಡನೇ ಅತಿದೊಡ್ಡ ತೈಲ ಉತ್ಪಾದಕವಾಗಿದ್ದು, ಮುಖ್ಯವಾಗಿ ಯುರೋಪಿಯನ್ ಸಂಸ್ಕರಣಾಗಾರಗಳಿಗೆ ಕಚ್ಚಾ ತೈಲವನ್ನು ಮಾರಾಟ ಮಾಡುತ್ತದೆ ಮತ್ತು ಯುರೋಪ್‌ಗೆ ನೈಸರ್ಗಿಕ ಅನಿಲದ ಅತಿದೊಡ್ಡ ಪೂರೈಕೆದಾರನಾಗಿದೆ. ಪ್ರಸ್ತುತ ಉಕ್ರೇನ್-ರಷ್ಯಾ ಬಿಕ್ಕಟ್ಟು ಕಚ್ಚಾ ತೈಲದ ಏರಿಕೆಗೆ ಕಾರಣವಾಗಿದೆ.
ಸದ್ಯ ಭಾರತದಲ್ಲಿ ಪಂಚರಾಜ್ಯಗಳ ಚುನಾವಣೆ ನಡೆಯುತ್ತಿದೆ. ಅ ನಂತರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಭಾರೀ ಹೆಚ್ಚಳವಾಗುವುದು.
ಇದನ್ನು ಒದಿ : https://cnewstv.in/?p=8694
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv