Cnewstv.in / 22.02.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Salary Hike : ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ – ಭತ್ಯೆ ಹೆಚ್ಚಳ. ಯಾರಿಗೆ ಎಷ್ಟೆಷ್ಟು ??
ಬೆಂಗಳೂರು : ಇಂದು ಸದನದಲ್ಲಿ ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆ(ತಿದ್ದುಪಡಿ)ಮಸೂದೆ 2022ಕ್ಕೆ ಅಂಗೀಕಾರ ನೀಡಲಾಗಿದೆ. ಇದರಿಂದಾಗಿ ಮುಖ್ಯಮಂತ್ರಿಗಳು ಸೇರಿದಂತೆ ಇತರ ಸಚಿವರುಗಳ ವೇತನ ಶೇಕಡಾ 50ರಷ್ಟು ಹೆಚ್ಚಾಗಲಿದೆ.
ವಿಧಾನಸಭೆಯಲ್ಲಿ ಕರ್ನಾಟಕ ಶಾಸಕರ ವೇತನ, ಪಿಂಚಣಿ ಮತ್ತು ಭತ್ಯೆ(ತಿದ್ದುಪಡಿ) ಮಸೂದೆ 2022ಕ್ಕೆ ಸಹ ಅಂಗೀಕಾರ ಸಿಕ್ಕಿದ್ದು, ಇದರಿಂದಾಗಿ ವಿಧಾನಸಭೆ, ವಿಧಾನ ಪರಿಷತ್ ಎರಡೂ ಸದನಗಳ ಶಾಸಕರ, ಸ್ಪೀಕರ್, ಉಪ ಸ್ಪೀಕರ್, ಸಭಾಪತಿ, ಉಪ ಸಭಾಪತಿಗಳ ಸಂಬಳ(Salary) ಶೇಕಡಾ 50ರಷ್ಟು ಹೆಚ್ಚಾಗಲಿದೆ. ಜತೆಗೆ ನಿವೃತ್ತಿ ವೇತನ ತಿದ್ದುಪಡಿ ವಿಧೇಯಕ ಅಂಗೀಕಾರ ಮಾಡಲಾಗಿದೆ. ಸದನ ಸದಸ್ಯರ ಮನೆ ಬಾಡಿಗೆ, ಪ್ರಯಾಣ ಖರ್ಚುವೆಚ್ಚ ಮತ್ತು ಇತರ ಭತ್ಯೆಗಳ ಸೌಲಭ್ಯವೂ ಹೆಚ್ಚು ಸಿಗಲಿದೆ.
ಮುಖ್ಯಮಂತ್ರಿಗಳ ತಿಂಗಳ ವೇತನ 50 ಸಾವಿರ ರೂಪಾಯಿ ಇತ್ತು. ಇದೀಗ 25 ಸಾವಿರ ಹೆಚ್ಚಾಗಿದ್ದು, ಇನ್ಮುಂದೆ ತಿಂಗಳಿಗೆ 75 ಸಾವಿರ ರೂಪಾಯಿ ಸಿಗಲಿದೆ.
ಸಂಪುಟ ದರ್ಜೆಯ ಸಚಿವರುಗಳ ಸಂಬಳ 40 ಸಾವಿರ ರೂ.ಗಳಿಂದ 60 ಸಾವಿರ ರೂ.ಗಳವರೆಗೆ ಏರಿಕೆಯಾಗಲಿದೆ.
ಮುಖ್ಯಮಂತ್ರಿ ಮತ್ತು ಮಂತ್ರಿಗಳ ಆತಿಥ್ಯ ಭತ್ಯೆ ವಾರ್ಷಿಕ 3 ಲಕ್ಷ ರೂ.ಗಳಿಂದ 4.5 ಲಕ್ಷ ರೂ.ಗಳಿಗೆ ಏರಿಕೆಯಾಗಲಿದೆ.
ಸಚಿವ ಸಂಪುಟ ದರ್ಜೆಯ ಮಂತ್ರಿಗಳ ತಿಂಗಳ ಮನೆ ಬಾಡಿಗೆ ಭತ್ಯೆ 80 ಸಾವಿರ ರೂ.ಗಳಿಂದ 1.20 ಲಕ್ಷ ರೂ.ಗಳವರೆಗೆ ಏರಿಕೆಯಾಗಲಿದೆ. ಸಚಿವರುಗಳ ಮನೆ ನಿರ್ವಹಣೆ ವೆಚ್ಚ 20 ಸಾವಿರ ರೂ.ಗಳಿಂದ 30 ಸಾವಿರ ರೂ.ಗಳವರೆಗೆ ಏರಿಕೆಯಾಗಿದೆ.
ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಪ್ರತಿ ತಿಂಗಳು ನೀಡುತ್ತಿರುವ ವಾಹನ ಭತ್ಯೆಯಲ್ಲೂ ಏರಿಕೆಯಾಗುತ್ತಿದ್ದು, ಈಗಿನ 1 ಸಾವಿರ ಲೀಟರ್ ಪೆಟ್ರೋಲ್ ಬೆಲೆಯನ್ನು 2 ಸಾವಿರ ಲೀಟರ್ ಪೆಟ್ರೋಲ್ ಬೆಲೆಯಷ್ಟು ವಾಹನ ಭತ್ಯೆಯನ್ನು ನೀಡಲಾಗುತ್ತದೆ.
ರಾಜ್ಯ ಮಂತ್ರಿಗಳ ಸಂಬಳ 35 ಸಾವಿರ ರೂ.ಗಳಿಂದ 50 ಸಾವಿರ ರೂ.ಗಳವರೆಗೆ ಮತ್ತು ವಾರ್ಷಿಕ ಆತಿಥ್ಯ ಭತ್ಯೆ 2 ಲಕ್ಷದಿಂದ 3 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ.
ರಾಜ್ಯ ಮಂತ್ರಿಗಳ ಮನೆ ಬಾಡಿಗೆಯನ್ನು 80 ಸಾವಿರದಿಂದ 1.20 ಲಕ್ಷ ರೂ.ಗಳವರೆಗೆ ಮತ್ತು ಮನೆ ನಿರ್ವಹಣಾ ವೆಚ್ಚವನ್ನು 20 ಸಾವಿರ ರೂ.ಗಳಿಂದ 35 ಸಾವಿರ ರೂ.ಗಳಿಗೆ ಏರಿಸಲಾಗಿದೆ.
ರಾಜ್ಯ ಮಂತ್ರಿಗಳಿಗೆ ನೀಡುತ್ತಿರುವ ವಾಹನ ಭತ್ಯೆಯಲ್ಲೂ ಏರಿಕೆಯಾಗಿದ್ದು, ಅವರಿಗೆ 1.500 ಲೀಟರ್ ಪೆಟ್ರೋಲ್ ಬೆಲೆಯ ವಾಹನ ಭತ್ಯೆ ನೀಡಲಾಗುತ್ತದೆ. ಉಪಮಂತ್ರಿಗಳ ಸಂಬಳ, ಮನೆ ಬಾಡಿಗೆ ಮತ್ತು ಭತ್ಯೆಗಳು ಏರಿಕೆಯಾಗಿದೆ.
ಮುಖ್ಯಮಂತ್ರಿ, ಸಚಿವರುಗಳ ಸಂಬಳ ಭತ್ಯೆ ಏರಿಕೆ ಜತೆಗೆ ಸಭಾಪತಿ, ಉಪಸಭಾಪತಿ, ವಿಧಾನಸಭಾಧ್ಯಕ್ಷರು, ಉಪಾಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರುಗಳ ಸಂಬಳ ಭತ್ಯೆಗಳು ಏರಿಕೆಯಾಗಲಿದೆ.
ವಿಧಾನಸಭಾಧ್ಯಕ್ಷರ ಹಾಗೂ ಉಪಾಧ್ಯಕ್ಷರ ಸಂಬಳ 50 ಸಾವಿರ ರೂ.ಗಳಿಂದ 75 ಸಾವಿರ ರೂ.ಗಳವರೆಗೆ, ಆತಿಥ್ಯ ಭತ್ಯೆ ವಾರ್ಷಿಕ 3 ಲಕ್ಷದಿಂದ 4 ಲಕ್ಷ ರೂ.ಗಳಿಗೆ, ಪ್ರಯಾಣ ಭತ್ಯೆ ಕಿ.ಮೀ.ಗೆ 30 ರಿಂದ 40 ರೂ.ಗಳವರೆಗೆ, ದಿನ ಭತ್ಯೆ 2 ಸಾವಿರದಿಂದ 3 ಸಾವಿರ ರೂ.ಗಳವರೆಗೆ, ಹೊರ ರಾಜ್ಯ ಪ್ರವಾಸ ಭತ್ಯೆಯಲ್ಲೂ ಏರಿಕೆಯಾಗಿದೆ.
ಸಭಾಪತಿ, ವಿಧಾನಸಭಾಧ್ಯಕ್ಷರ ಬಾಡಿಗೆ 80 ರಿಂದ 1.60ಲಕ್ಷ ರೂ.ಗಳವರೆಗೆ, ವಿಧಾನಸಭೆಯ ಉಪಾಭಾಧ್ಯಕ್ಷ ಹಾಗೂ ಉಪಸಭಾಪತಿ ಸಂಬಳ 40 ರಿಂದ 60 ಸಾವಿರ ರೂ.ಗಳವರೆಗೆ.
ವಾಹನ ಭತ್ಯೆ 2 ಸಾವಿರ ಲೀಟರ್ ಪೆಟ್ರೋಲ್ ಬೆಲೆ. ವಿರೋಧ ಪಕ್ಷದ ನಾಯಕರ ಸಂಬಳ 40 ಸಾವಿರದಿಂದ 60ಸಾವಿರ, ಆತಿಥ್ಯ ಭತ್ಯೆ 2 ಲಕ್ಷದಿಂದ 2.5 ಲಕ್ಷ, ವಾಹನ ಭತ್ಯೆ 1 ಸಾವಿರ ಲೀಟರ್ ಪೆಟ್ರೋಲ್ ಬೆಲೆಯ ಬದಲು 2 ಸಾವಿರ ಲೀಟರ್ ಪೆಟ್ರೋಲ್ ಬೆಲೆಯ ವಾಹನ ವೆಚ್ಚ ಏರಿಕೆಯಾಗಿದೆ.
ಸರ್ಕಾರಿ ಮುಖ್ಯ ಸಚೇತಕರಿಗೆ ಸಂಬಳ 35 ಸಾವಿರ ರೂ.ಗಳಿಂದ 50 ಸಾವಿರ ರೂ.ಗಳವರೆಗೆ, ವಿರೋಧ ಪಕ್ಷದ ಮುಖ್ಯ ಸಚೇತಕರ ಸಂಬಳ ತಲಾ 35 ರಿಂದ 50 ಸಾವಿರ ರೂ.ಗಳವರೆಗೆ ಏರಿಕೆಯಾಗಿದೆ. ಇದರ ಜತೆಗೆ ವಾಹನ ಭತ್ಯೆ, ಪ್ರಯಾಣ ಭತ್ಯೆಯಲ್ಲೂ ಹೆಚ್ಚಳವಾಗಿದೆ.
ಶಾಸಕರ ಸಂಬಳ 25ಸಾವಿರ ರೂ.ಗಳಿಂದ 40ಸಾವಿರ ರೂ.ಗಳವರೆಗೆ ಏರಿಕೆಯಾಗಿದೆ. ಶಾಸಕರ ನಿವೃತ್ತಿ ವೇತನ 40ರಿಂದ 50ಸಾವಿರ ರೂ.ಗಳವರೆಗೆ ಏರಿಕೆಯಾಗಿದೆ. ನಿವೃತ್ತಿ ವೇತನ 1 ಲಕ್ಷ ಮೀರುವಂತಿಲ್ಲ.
ದೂರವಾಣಿ ವೆಚ್ಚ ಯತಾಸ್ಥಿತಿ ತಿಂಗಳಿಗೆ 20,00 ಕಾಯ್ದಿರಿಸಲಾಗಿದೆ. ಆಪ್ತ ಸಹಾಯಕನಿಗೆ ಮತ್ತು ರೂಮ್ ಬಾಯ್ ಸಿಬ್ಬಂದಿಗೆ 10 ಸಾವಿರದಿಂದ 20 ಸಾವಿರ ರೂಗೆ ಹೆಚ್ಚಿಸಲಾಗಿದೆ
ಇದನ್ನು ಒದಿ : https://cnewstv.in/?p=8658
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments