Breaking News

ಫ್ಯಾಮಿಲಿ ಪ್ಯಾಕ್ : ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್..

Cnewstv.in / 18.02.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಫ್ಯಾಮಿಲಿ ಪ್ಯಾಕ್ : ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್..

PRK ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ವಾದಂತಹ ಫ್ಯಾಮಿಲಿ ಪ್ಯಾಕ್ ಚಿತ್ರ, ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದೆ.
ಅಮೆಜಾನ್ ಪ್ರೈಂ ಓಟಿಪಿ ಪ್ಲಾಟ್ ಫಾರ್ಮ್ ನಲ್ಲಿ ರಿಲೀಸಾದ ಫ್ಯಾಮಿಲಿ ಪ್ಯಾಕ್ ಚಿತ್ರ ಕೌಟುಂಬಿಕ ಆಧಾರಿತ ಮನೋರಂಜನಾ ಚಿತ್ರವಾಗಿದೆ. 3/5 ರೇಟಿಂಗ್ ಗಳಿಸಿದೆ.

ನಿರ್ದೇಶಕ ಅರ್ಜುನ್ ಹಾಗೂ ನಟ ಲಿಖಿತ್ ಶೆಟ್ಟಿ ಯವರ ಕಾಂಬಿನೇಷನ್ ನಲ್ಲಿ ಮೂಡಿಬಂದ ಸಂಕಷ್ಟಕರ ಗಣಪತಿ ತೆರೆಗೆ ಬಂದು ಜನರನ್ನ ರಂಜಿಸಿತ್ತು. ಇಂದು ಇದೇ ಜೋಡಿ ಫ್ಯಾಮಿಲಿ ಪ್ಯಾಕ್ ನಲ್ಲಿ ಕೂಡ ಒಂದಾಗಿದೆ.‌

ಮಲೆನಾಡಿನ ಯುವ ನಿರ್ದೇಶಕ ಅರ್ಜುನ್ ಆಕ್ಷನ್ ಕಟ್ ಹೇಳಿದ್ದು, ವಿಭಿನ್ನವಾಗಿ ನಿರ್ದೇಶಿಸಿದ್ದಾರೆ. ನಾಯಕನಟ
ಲಿಖಿತ್ ಶೆಟ್ಟಿ, ನಟಿ ಅಮೃತ ಅಯ್ಯರ್ ಜೊಡಿ ತೆರೆ ಮೇಲೆ ಅತ್ಯುತ್ತಮವಾಗಿ ಮೂಡಿ ಬಂದಿದೆ. ಮುಖ್ಯ ಪಾತ್ರದಲ್ಲಿ ರಂಗಾಯಣ ರಘು, ಸಾಧು ಕೋಕಿಲ,‌ಅಚ್ಯುತ್ ಕುಮಾರ್, ಸಿಹಿ ಕಹಿ ಚಂದ್ರು ಅಭಿನಯಿಸಿದ್ದಾರೆ. ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ್ದು, ಶ್ರೀಶ ಕುದುವಳ್ಳಿ, ಉದಯ್ ಲೀಲಾ ಅವರು ಛಾಯಾಗ್ರಹಣ ಮತ್ತು ದೀಪು ಎಸ್ ಕುಮಾರ್ ರವರ ಸಂಕಲನವಿದೆ.

ಆರಂಭದಲ್ಲಿ ಹಾರರ್ ಸಿನಿಮಾ ಅನಿಸಿದರು ಕೂಡ,
ಕಥೆಯಲ್ಲಿನ ಫ್ಲಾಷ್ ಬ್ಯಾಕ್ ಗಳು, ಕಾಮಿಡಿ, ಟ್ವಿಸ್ಟ್ ಗಳು ಪ್ರೇಕ್ಷಕರನ್ನ ಎರಡು ಗಂಟೆ ಹಿಡಿದಿಟ್ಟುಕೊಳ್ಳುತ್ತದೆ.‌ ಫ್ಯಾಮಿಲಿ ಪ್ಯಾಕ್ ಹೆಸರೇ ಹೇಳುವಂತೆ ಕೌಟುಂಬಿಕ ಆಧಾರಿತ ಸಿನಿಮಾ ವಾಗಿದ್ದು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದೆ.

ವಿಚ್ಛೇದನವನ್ನು ಪಡೆದ ತಂದೆ-ತಾಯಿಯ ಮಗನೇ ಚಿತ್ರದ ನಾಯಕನಟ. ಆರು ತಿಂಗಳು ತಂದೆಯ ಮನೆಯಲ್ಲಿ ಆರು ತಿಂಗಳು ತಾಯಿಯ ಮನೆಯಲ್ಲಿ ವಾಸವಿರಬೇಕು. ಇದರಿಂದ ಬೇಸತ್ತ ನಟ ಒಬ್ಬನೇ ಮನೆ ಮಾಡಲು ಮುಂದಾಗುತ್ತಾನೆ. ಆಗ ಹೊಸ ಮನೆಯಲ್ಲಿ ಎಂಟ್ರಿಕೊಡುವ ರಂಗಾಯಣ ರಘು ಅವರ ಪಾತ್ರ, ಹಾಗೂ ತಾನು ಪ್ರೀತಿಸುತ್ತಿರುವ ಸೋಶಿಯಲ್ ಮೀಡಿಯಾ ಕ್ರೇಜ್ ಇರುವ ನಾಯಕನಟಿಯನ್ನು ಹೇಗೆ ಒಲಿಸಿಕೊಳ್ಳುತ್ತಾರೆ ಎನ್ನುವ ಸ್ಟೋರಿಯನ್ನು ಅದ್ಭುತವಾಗಿ ನಿರ್ದೇಶಕ ಅರ್ಜುನ್ ಚಿತ್ರಸಿದ್ದಾರೆ.

ಇದನ್ನು ಒದಿ : https://cnewstv.in/?p=8512

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*