Cnewstv.in /15.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸವಳಂಗ ರಸ್ತೆ, ಕಾಶಿಪುರ, ಕಡದಕಟ್ಟೆಯಲ್ಲಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಯಾವಾಗ ಮುಕ್ತಾಯವಾಗಲಿದೆ ?? ಅದರ ಅಂದಾಜುವೆಚ್ಚ ಗೊತ್ತಾ??
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಎಲ್.ಸಿ. 31-ಕಡದಕಟ್ಟೆ, ಶಿವಮೊಗ್ಗದ ಎಲ್.ಸಿ.49 ಸವಳಂಗ ರಸ್ತೆ ಹಾಗೂ ಎಲ್ ಸಿ 54 ಕಾಶಿಪುರ ಗೇಟ್ ರೈಲ್ವೇ ಮೇಲ್ಸೇತುವೆ ಹಾಗೂ ಶಿವಮೊಗ್ಗ ವಿದ್ಯಾನಗರ ಬಳಿಯ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು.
ರೈಲ್ವೆ ಇಲಾಖೆ ವತಿಯಿಂದ ನಿರ್ಮಿಸಲಾಗುತ್ತಿರುವ ಮೂರು ರೈಲ್ವೆ ಮೇಲ್ಸೇತುವೆ ಕಾಮಗಾರಿಗಳ ಅಂದಾಜು ವೆಚ್ಚ ರೂ. 116.31 ಕೋಟಿಗಳಾಗಿದ್ದು, ಇದರಲ್ಲಿ ಕಾಮಗಾರಿಯ ವೆಚ್ಚದ ಶೇ. 50 ರಷ್ಟು ಹಾಗೂ ಭೂಸ್ವಾಧೀನದ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವು ಭರಿಸಲಿದೆ.ಈ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ರೂ. 70.05 ಕೋಟಿಗಳ ಅನುದಾನವನ್ನು ಒದಗಿಸಲಾಗುತ್ತಿದೆ. ರೈಲ್ವೆ ಇಲಾಖೆಗೆ ರಾಜ್ಯ ಸರ್ಕಾರದಿಂದ ಈಗಾಗಲೇ ರೂ. 8.61 ಕೋಟಿ ಹಾಗೂ ಭೂಸ್ವಾಧೀನಕ್ಕಾಗಿ ರೂ. 20.60 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸಂಸದರಾದ ಬಿ. ವೈ. ರಾಘವೇಂದ್ರ ತಿಳಿಸಿದರು.
ರೈಲ್ವೆ ಇಲಾಖೆಯು ಈ ಮೂರು ಕಾಮಗಾರಿಗಳನ್ನು ನಿರ್ಮಾಣ ಕಂಪನಿಗೆ (ಎಸ್.ಆರ್.ಸಿ. ಕಂಪನಿ) ಗುತ್ತಿಗೆ ನೀಡಿದೆ. ಈಗಾಗಲೇ ಮೂರು ಕಾಮಗಾರಿಗಳು ಭರದಿಂದ ಜರಗುತ್ತಿದೆ. ಮು೦ದಿನ 10-12 ತಿಂಗಳುಗಳಲ್ಲಿ ಪೂರ್ಣಗೊಳಿಸಲಾಗುವುದು ಹಾಗೂ ಜಿಲ್ಲಾಡಳಿತವು ಭೂಸ್ವಾಧೀನ ಹಾಗೂ ಯುಟಿಲಿಟಿ ಷಿಪ್ಟಿಂಗ್ ಗಾಗಿ ಅಗತ್ಯ ಕ್ರಮವನ್ನು ಕೈಗೊಂಡಿದ್ದು, ಶೀಘ್ರದಲ್ಲಿಯೇ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ, ಕಾಶಿಪುರ ಹಾಗೂ ಸವಳ೦ಗ ರಸ್ತೆ ಮೇಲ್ವೇತುವೆಗಳಲ್ಲಿ ನಾಗರೀಕರಿಗೆ ನೆರವಾಗುವ ದೃಷ್ಟಿಯಿಂದ Under Pass ನ್ನು ಸಹ ನಿರ್ಮಿಸಲು ನಿರ್ಧರಿಸಲಾಗಿದೆ.
ಶಿವಮೊಗ್ಗ ನಗರದ ಸವಳಂಗ ರಸ್ತೆಯಲ್ಲಿರುವ ರೈಲ್ವೆ ಲೆವೆಲ್ ಕ್ರಾಸಿಂಗ್ 49ರ ಬದಲಿಗೆ ರೂ. 60.76 ಕೋಟಿ ವೆಚ್ಚದಲ್ಲಿ ರೈಲ್ವೆ ಮೇಲ್ವೇತುವೆ ಹಾಗೂ ಕೆಳಸೇತುವೆ ನಿರ್ಮಾಣ.
ಶಿವಮೊಗ್ಗ ನಗರದ ಕಾಶಿಪುರ ರೈಲ್ವೆ ಲೆವೆಲ್ ಕ್ರಾಸಿಂಗ್ 52ರ ಬದಲಿಗೆ ರೂ. 29.63 ಕೋಟಿ ವೆಚ್ಚದಲ್ಲಿ ರೈಲ್ವೆ ಮೇಲ್ವೇತುವೆ ಹಾಗೂ ಪಿ.ಟಿ. ಕಾಲೋನಿಗೆ ಹೋಗುವ ರಸ್ತೆಯಲ್ಲಿನ ರೈಲ್ವೆ ಲೆವೆಲ್ ಕ್ರಾಸಿಂಗ್‌ಗೆ ರೈಲ್ವೆ ಕೆಳಸೇತುವೆ ನಿರ್ಮಾಣ.
ಇದನ್ನು ಒದಿ : https://cnewstv.in/?p=8430
ಭದ್ರಾವತಿ ನಗರದ ಕಡದಕಟ್ಟೆ ಬಳಿ ಇರುವ ರೈಲ್ವೆ ಲೆವೆಲ್ ಕ್ರಾಸಿಂಗ್ 34ರ ಬದಲಿಗೆ ರೂ. 25.92 ಕೋಟಿ ವೆಚ್ಚದಲ್ಲಿ ರೈಲ್ವೆ ಮೇಲ್ವೇತುವೆ ನಿರ್ಮಾಣ.
ರಾಷ್ಟ್ರೀಯ ಹೆದ್ದಾರಿ 13ರ ಕಿ.ಮಿ. 525.00 ರಲ್ಲಿ ರೈಲ್ವೆ ಸರಪಳಿ 60/950ರ ಶಿವಮೊಗ್ಗ ನಗರದ ವಿದ್ಯಾನಗರ ಬಳಿ ಎಲ್.ಸಿ.4ಂಗೆ ಹೆದ್ದಾರಿ ರೂ. 43.90 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಇಲಾಖೆ ವತಿಯಿಂದ ವೃತ್ತಕಾರದ ರೈಲ್ವೆ
ಕೋಟೆಗಂಗೂರು ಕೋಚಿಂಗ್ ಡಿಪೋ:
ರೂ. 76 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೋಟೆಗಂಗೂರು ಕೋಚಿಂಗ್ ಡಿಪೋವನ್ನು ಕೇಂದ್ರ ಸರ್ಕಾರವು ಶಿವಮೊಗ್ಗದ ಕೋಟೆಗಂಗೂರಿಗೆ ಮಂಜೂರು ಮಾಡಿದ್ದು, ಈ ಕೋಚಿಂಗ್ ಡಿಪೋಗಾಗಿ ಸುಮಾರು 10 ಎಕರೆ ಖಾಸಗಿ ಭೂಸ್ವಾಧಿನದ ಅಗತ್ಯವಿದ್ದು, ಕೆ.ಐ.ಎ.ಡಿ.ಬಿ. ಸಂಸ್ಥೆ ಈ ಭೂಮಿಯನ್ನು 2 ತಿಂಗಳ ಒಳಗೆ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಿದೆ.
ರೈಲ್ವೆ ಇಲಾಖೆಯು ರೈಲ್ವೆ ಜಮೀನಿನಲ್ಲಿ ಈಗಾಗಲೇ ಅಗತ್ಯ ಪೂರ್ವ ಸಿದ್ಧತೆಯ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ.
ಕೋಟೆಗಂಗೂರಿನಲ್ಲಿ ರೂ. 21 ಕೋಟಿಗಳ ಅಂದಾಜು ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿರುವ ಟರ್ಮಿನಲ್ ಸ್ಟೇಷನ್ ಕಾಮಗಾರಿಯ ಟೆಂಡರ್ ಅನ್ನು ಶೀಘ್ರದಲ್ಲಿಯೆ ಕರೆಯಲಾಗುತ್ತದೆ ಎಂದರು.
ಇದನ್ನು ಒದಿ : https://cnewstv.in/?p=8438
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments