Breaking News

ಗಬ್ಬು ನಾರುತ್ತಿದೆ ಶಿವಮೊಗ್ಗ ಸ್ಮಾರ್ಟ್ ಸಿಟಿ – ಮೂಗಿಗೆ ಬಟ್ಟೆ ಇಟ್ಟುಕೊಂಡು ಓಡಾಡುತ್ತಿರುವ ಮಲೆನಾಡಿಗರು – ಶಿವಮೊಗ್ಗಕ್ಕೆ ಬಂದವರಿಗೆ ಗಬ್ಬು ವಾಸವನೆಯ ಸ್ವಾಗತ

Cnewstv / 08.02.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಗಬ್ಬು ನಾರುತ್ತಿದೆ ಶಿವಮೊಗ್ಗ ಸ್ಮಾರ್ಟ್ ಸಿಟಿ – ಮೂಗಿಗೆ ಬಟ್ಟೆ ಇಟ್ಟುಕೊಂಡು ಓಡಾಡುತ್ತಿರುವ ಮಲೆನಾಡಿಗರು – ಶಿವಮೊಗ್ಗಕ್ಕೆ ಬಂದವರಿಗೆ ಗಬ್ಬು ವಾಸವನೆಯ ಸ್ವಾಗತ

ಶಿವಮೊಗ್ಗ : ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ತನ್ನ ಸೌಂದರ್ಯದಿಂದ ಜನರನ್ನು ತನ್ನತ್ತ ಸೆಳೆಯುತ್ತಿದೆ. ಸ್ಮಾರ್ಟ್ ಸಿಟಿ ಶಿವಮೊಗ್ಗ ಇದೀಗ ರಾಜ್ಯ ರಾಜಧಾನಿ ಬೆಂಗಳೂರಿಗಿಂತ ಏನು ಕಡಿಮೆ ಇಲ್ಲ ಎಂಬಂತೆ ಬೆಳೆಯುತ್ತಿದೆ. ಆದರೆ ಇದೀಗ ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿರುವಂತಹ ಜನರಿಗೆ ಶಿವಮೊಗ್ಗದ ಪ್ರಮುಖ ಬಸ್ ಸ್ಟಾಂಡ್ ವೃತ್ತದಲ್ಲಿ ಗಬ್ಬು ವಾಸನೆಯ ಸ್ವಾಗತ ದೊರೆಯುತ್ತಿದೆ.

ಶಿವಮೊಗ್ಗದ ಬಸ್ ನಿಲ್ದಾಣದ ವೃತ್ತ ಈಗ ಗಬ್ಬು ನಾರುತ್ತಿದೆ. ಬಸ್ ಸ್ಟ್ಯಾಂಡ್ ನ ಆಶೋಕ ವೃತ್ತದಲ್ಲಿ ಜನರು ಮೂಗಿಗೆ ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದಂತು ಸುಳ್ಳಲ್ಲ. ಅಷ್ಟರ ಮಟ್ಟಿಗೆ ಗಬ್ಬು ನಾರುತ್ತಿದೆ. ಯುಜಿಡಿ ಗಲೀಜು ನೀರಿನಿಂದ ಈ ರೀತಿ ಪರಿಸ್ಥಿತಿ ಎದುರಾಗಿದೆ. ಕಳೆದ ಎರಡು ಮೂರು ದಿನಗಳಿಂದ ರಸ್ತೆಯ ಮೇಲೆ ಕರೆಯುತ್ತಿರುವ ಯುಜಿಡಿ ಗಲೀಜು ನೀರು ಹರಿಯುತ್ತಿದ್ದು, ಮಹಾನಗರ ಪಾಲಿಕೆಗೆ ಹಿಡಿ ಸಾರ್ವಜನಿಕರು ಶಾಪ ಹಾಕುತ್ತಿದ್ದಾರೆ. ಇದರಿಂದ ಸುತ್ತಮುತ್ತಲಿನ ಹೋಟೆಲ್ ಹಾಗೂ ಅಂಗಡಿ ಮುಂಗಟ್ಟುಗಳಿಗೆ ತೊಂದರೆ ಉಂಟಾಗಿದೆ. ಗಲೀಜು ನೀರು ಹರಿಯುವುದನ್ನು ತಡೆಗಟ್ಟಲು ವಿಫಲವಾಗಿರುವ ಪಾಲಿಕೆ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಈ ಗಲೀಜು ನೀರಿನಿಂದ ವಾಹನ ಸವಾರರು ಹಾಗೂ ಪಾದಾಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಸಾವಿರಾರು ಜನರು ಹಾಗೂ ವಾಹನಗಳ ಓಡಾಡುತ್ತಿರುವ ಜಾಗದಲ್ಲಿ ಅವಾಂತರ ಸೃಷ್ಟಿ ಆಗಿರುವುದು ಶಿವಮೊಗ್ಗ ಸ್ಮಾರ್ಟ್ ಸಿಟಿ ಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ‌. ಇದರಿಂದ ರಾಜ್ಯದ ವಿವಿಧ ಕಡೆಗಳಿಂದ ಶಿವಮೊಗ್ಗಕ್ಕೆ ಬಂದು ಮೊದಲ ಬಾರಿಗೆ ಇಳಿಯುವ ಜಾಗದಲ್ಲಿ ಗಲೀಜಿನ ಸ್ವಾಗತ ಸಿಗುವಂತಾಗುರುವುದು ವಿಪರ್ಯಾಸವೆ ಸರಿ. ಇನ್ನಾದರೂ ಪಾಲಿಕೆ ಎಚ್ಚೆತ್ತುಕೊಂಡು ಸಮಸ್ಯೆ ಸರಿಪಡಿಸಬೇಕಿದೆ.

 

 

 

#Shivamogga #Busstand #UGD #Citycorporation #Road #PWD #Police #Health #Smartcity

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಒದಿ..

Leave a Reply

Your email address will not be published. Required fields are marked *

*