Breaking News

ಶಿವಮೊಗ್ಗದಲ್ಲಿ ಆರಂಭವಾಗುತ್ತಿದೆ ಬಹುದಿನಗಳ ಬೇಡಿಕೆಯ CGHS-Wellness Center..

Cnewstv / 10.02.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗದಲ್ಲಿ ಆರಂಭವಾಗುತ್ತಿದೆ ಬಹುದಿನಗಳ ಬೇಡಿಕೆಯ CGHS-Wellness Center..

ಶಿವಮೊಗ್ಗ : ಶಿವಮೊಗ್ಗದಲ್ಲಿ ಬಹುದಿನಗಳ ಬೇಡಿಕೆಯಾಗಿದ್ದ CGHS-Wellness Center ಆರಂಭವಾಗುತ್ತಿದೆ.

ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರಾದ ಬಿ ವೈ ರಾಘವೇಂದ್ರರವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಮನ್ಸುಕ್ ಮಾಂಡವೀಯ ಇವರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರಿ ನೌಕರರ ಮತ್ತು ನಿವೃತ್ತ ನೌಕರರ ಕುಟುಂಬಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದ ಆರೋಗ್ಯ ಸೇವೆ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಸುಸರ್ಜಿತ ಕ್ಷೇಮ ಕೇಂದ್ರವನ್ನು (Central Government Health Scheme-Wellness Centre) ಕೂಡಲೇ ಆರಂಭಿಸಲು ಕಳೆದ 20.10.2022ರಲ್ಲಿ ಮನವಿ ಸಲ್ಲಿಸಿದ್ದಲ್ಲದೇ ಹಲವು ಬಾರಿ ವೈಯಕ್ತಿಕವಾಗಿ ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದರು.

ಸಂಸದರ ಮನವಿಗೆ ಸ್ಪಂದಿಸಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಮನ್ಸುಕ್ ಮಾಂಡವೀಯರವರು ಕಳೆದ ಜನವರಿ 10 ರಂದು ಶಿವಮೊಗ್ಗದಲ್ಲಿ CGHS WELLNESS CENTRE ಸ್ಥಾಪಿಸಲು ಅಗತ್ಯವಿರುವ ಮೂಲಭೂತ ಸೌಕರ್ಯಗಳು ಮತ್ತಿತರೆ ಅಂಶಗಳ ಬಗ್ಗೆ ಕೂಲಂಕುಷವಾಗಿ ಸ್ಥಳಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಬೆಂಗಳೂರಿನ CGHS ನ ಹೆಚ್ಚುವರಿ ನಿರ್ಧೇಶಕರ ನೇತೃತ್ವದ ತಂಡವನ್ನು ರಚಿಸಿ ಕಳುಹಿಸಿಕೊಟ್ಟಿದ್ದರು. ಅದರನ್ವಯ ಸದರಿ ತಂಡವು ಶಿವಮೊಗ್ಗಕ್ಕೆ ಬಂದಾಗ ಮಾನ್ಯ ಸಂಸದರೊಂದಿಗೆ ಹಲವು ಕಟ್ಟಡಗಳನ್ನು ವೀಕ್ಷಿಸಿ ಅಂತಿಮವಾಗಿ ಶರಾವತಿ ನಗರದಲ್ಲಿರುವ ಹಳೆಯ ಬಿ.ಎಸ್.ಎನ್.ಎಲ್. ಕಟ್ಟಡವನ್ನು ಆಯ್ಕೆ ಮಾಡಿ, ಶಿವಮೊಗ್ಗದಲ್ಲಿ CGHS wellness center ಸ್ಥಾಪನೆ ಮಾಡಲು ಶಿಫಾರಸ್ಸು ಮಾಡಿತ್ತು.

ಇಡೀ ದೇಶದಲ್ಲಿ ಪ್ರಾರಂಭಿಸಲಾಗುತ್ತಿರುವ 20 ನಗರಗಳ ಪೈಕಿ ವಿಶೇಷವಾಗಿ ಶಿವಮೊಗ್ಗದಲ್ಲಿಯೂ ಸಹ CGHS Wellness Centre ಪ್ರಾರಂಭಿಸಲು ತಾತ್ವಿಕ ಅನುಮೋದನೆಯನ್ನು ನೀಡಿರುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ಶಿವಮೊಗ್ಗ ಜಿಲ್ಲೆಯ 7518 ಹಾಗೂ ದಾವಣಗೆರೆ ಜಿಲ್ಲೆಯ 4888, ಚಿತ್ರದುರ್ಗ ಜಿಲ್ಲೆಯ 2079 ನೆರೆ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 14ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಬಿ.ಎಸ್.ಎನ್.ಎಲ್., ಪೋಸ್ಟಲ್, ಇನಕಂಟ್ಯಾಕ್ಸ್, ಪ್ರಾವಿಡೆಂಡ್ ಫಂಡ್, ಸೆಂಟ್ರಲ್ ಎಕ್ಸೈಸ್, ನಿವೃತ್ತ ಅರೆ ಸೇನಾ ಪಡೆ, ಕೇಂದ್ರೀಯ ವಿದ್ಯಾಲಯ, ರಾಷ್ಟ್ರೀಯ ರಕ್ಷಾ ಯೂನಿವರ್ಸಿಟಿ ಮತ್ತಿತರೆ ಕೇಂದ್ರ ಸರ್ಕಾರದ ನೌಕರರು ಹಾಗೂ ನಿವೃತ್ತ ನೌಕರರ ಮತ್ತು ಕುಟುಂಬವರ್ಗದವರುಗಳ ಕ್ಷೇಮಾಭಿವೃದ್ಧಿಯನ್ನು ಕಾಪಾಡಿಕೊಂಡು ಬರಲು ಈ ಒಂದು ಸುಸರ್ಜಿತ ಕ್ಷೇಮ ಕೇಂದ್ರದ (CGHS Wellness Centre) ಅತ್ಯಂತ ಉಪಯುಕ್ತವಾಗಲಿದೆ.

ಹಾಲಿ ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿರುವ ಕ್ಷೇಮ ಕೇಂದ್ರಗಳನ್ನು ಅವಲಂಬಿಸಿದ್ದ ಇವರುಗಳಿಗೆ ಶಿವಮೊಗ್ಗದಲ್ಲಿ ಪ್ರಾರಂಭವಾಗುತ್ತಿರುವ Wellness Center ಗೆ ಒಳಪಡುವ ಅನುಮತಿ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಔಷದೋಪಚಾರಗಳು ಉಚಿತವಾಗಿ ಮತ್ತು ತ್ವರಿತಗತಿಯಲ್ಲಿ ದೊರೆಯುತ್ತದೆ. ಕೇಂದ್ರ ಸರ್ಕಾರಿ ನೌಕರರು ಮತ್ತು ನಿವೃತ್ತ ನೌಕರರ ಹಲವು ವರ್ಷಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೆರಿಸುತ್ತಿರುವುದಕ್ಕೆ ಸಮಸ್ತ ನೌಕರರು ಮತ್ತು ಅವರುಗಳ ಕುಟುಂಬ ವರ್ಗದವರ ಪರವಾಗಿ ಪ್ರಧಾನಿ ನರೇಂದ್ರ ಮೋದೀಜಿಯವರಿಗೆ ಮತ್ತು ವಿಶೇಷವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಮನ್ಸುಕ್ ಮಾಂಡವೀಯರವರಿಗೆ ಹೃತ್ಪೂರ್ವಕ ಧನ್ಯವಾದಗಳು. 

            ಬಿ. ವೈ ರಾಘವೇಂದ್ರ. ಸಂಸದರು.

#Shivamogga #BYRagavendra #CGHSCenter #Citycorporation #Road #PWD #Police #Health

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಒದಿ…

 

ಲೋಕಸಭೆ ಚುನಾವಣೆಯಲ್ಲಿ ರಾಘವೇಂದ್ರರನ್ನು ಗೆಲ್ಲಿಸಿ ಎಂದು ಕರೆ ಕೊಟ್ಟ ಶಾಮನೂರು ಶಿವಶಂಕರಪ್ಪ..

 

https://www.instagram.com/travelshivamogga_?igsh=Z2h6NmVieTEweGti

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Hosanagara JDS Kerala K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments