Breaking News

ರಾಣಿ ಎಲಿಜಬೆತ್ ರ ಕೊಹಿನೂರು ಕಿರೀಟ ಯಾರ ಪಾಲು ಗೊತ್ತಾ??

Cnewstv.in / 12.02.2022 / ಲಂಡನ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ರಾಣಿ ಎಲಿಜಬೆತ್ ರ ಕೊಹಿನೂರು ಕಿರೀಟ ಯಾರ ಪಾಲು ಗೊತ್ತಾ??

ಲಂಡನ್ : 1937ರಲ್ಲಿ ಬ್ರಿಟಿಷ್ ರಾಣಿ ಎಲಿಜಬೆತ್ ರ ಕಿರೀಟ ಸೇರಿದ್ದ ಕೊಹಿನೂರು ವಜ್ರ ಸುಮಾರು 800 ವರ್ಷಗಳ ಭಾರತದ ಇತಿಹಾಸವನ್ನು ಹೊಂದಿದೆ.

ಭಾರತದಲ್ಲಿ 14ನೇ ಶತಮಾನದಲ್ಲಿ ಪತ್ತೆಯಾದ 105.6 ಕ್ಯಾರೆಟ್‌ನ ವಜ್ರ ಆ ಕಿರೀಟದಲ್ಲಿದೆ. ಸಂಪೂರ್ಣ ಕಿರೀಟವನ್ನು ಪ್ಲಾಟಿನಂ ಮತ್ತು ವಜ್ರದಿಂದಲೇ ತಯಾರಿಸಲಾಗಿದೆ. ಹಾಗೂ ವಿಶ್ವ ವಿಖ್ಯಾತ ಕೊಹಿನೂರು ವಜ್ರದೊಂದಿಗೆ 2,800 ವಜ್ರಗಳು ಈ ಕಿರೀಟದಲ್ಲಿದೆ.

ಬ್ರಿಟನ್‌ ರಾಜಮನೆತನದ ಸಂಪ್ರದಾಯದಂತೆ ರಾಣಿಯಾಗುವವರು ಈ ಕಿರೀಟವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಈವರೆಗೆ ಕಿರೀಟ ರಾಣಿ 2ನೇ ಎಲಿಜಬೆತ್‌ ಅವರದ್ದಾಗಿತ್ತು. ನಂತರದಲ್ಲಿ ರಾಣಿ ಎಲಿಜಬೆತ್ ಅವರ ಹಿರಿಯ ಪುತ್ರ ಪ್ರಿನ್ಸ್ ಚಾಲ್ರ್ಸ್ ಮುಂದಿನ ವರ್ಷ ಉತ್ತರಾಧಿಕಾರವನ್ನು ವಹಿಸಿಕೊಳ್ಳಿದ್ದು, ಅವರ ಪತ್ನಿ ಡಚೆಸ್ ಆಫ್ ಕಾರ್ನ್‍ವಾಲ್ ಕ್ಯಾಮಿಲ್ಲಾ ವಿಶ್ವಪ್ರಸಿದ್ಧ ಕೊಹಿನೂರು ವಜ್ರವಿರುವ ಕಿರೀಟವನ್ನು ತೊಡಲಿದ್ದಾರೆ.

ಇದನ್ನು ಒದಿ : https://cnewstv.in/?p=8378

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*