Cnewstv.in / 11.02.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
RTI ಮಾಹಿತಿ : ಕಾಂಗ್ರೆಸ್ ಕೇಂದ್ರ ಕಚೇರಿ, ಮನೆ ಸೇರಿದಂತೆ ಹಲವು ಆಸ್ತಿಗಳ ಬಾಡಿಗೆ ಉಳಿಸಿಕೊಂಡಿರುವ ಸೋನಿಯಾ ಗಾಂಧಿ.
ನವದೆಹಲಿ : ಕಾಂಗ್ರೆಸ್ ನ ಹಿರಿಯ ನಾಯಕಿ, ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿಯವರು ಕಾಂಗ್ರೆಸ್ ಕೇಂದ್ರ ಕಚೇರಿ, ತಮ್ಮ ಮನೆ ಸೇರಿದಂತೆ ಹಲವಾರು ಅಧಿಕೃತ ಆಸ್ತಿಗಳ ಬಾಡಿಗೆಯನ್ನು ಪಾವತಿಸಿಲ್ಲ ಎಂಬ ಮಾಹಿತಿ ಆರ್ ಟಿ ಐ ಯಿಂದ ಬಹಿರಂಗವಾಗಿದೆ.
ಹೌದು ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೀಡು ಮಾಡುವಂತಹ ಮಾಹಿತಿಯನ್ನ ಸಾಮಾಜಿಕ ಕಾರ್ಯಕರ್ತ ಸುಜಿತ್ ಪಟೇಲ್ ಸಲ್ಲಿಸಿರುವ ಮಾಹಿತಿ ಹಕ್ಕು ಕಾಯ್ದೆ (RTI) ಅನುಸಾರ ಬೆಳಕಿಗೆ ಬಂದಿದೆ.
ಸೋನಿಯಾ ಗಾಂಧಿಯವರು ವಾಸವಿರುವ ಅಧಿಕೃತ ನಿವಾಸ ಸೇರಿದಂತೆ ಕಾಂಗ್ರೆಸ್ ನಾಯಕರು ವಶಪಡಿಸಿಕೊಂಡಿರುವ ಹಲವು ಆಸ್ತಿಗಳ ಬಾಡಿಗೆ ಇನ್ನೂ ಕೂಡ ಪಾವತಿಸಿಲ್ಲ. ಲಕ್ಷಾಂತರ ರೂಪಾಯಿ ಬಾಡಿಗೆ ಹಣವನ್ನು ಬಾಕಿ ಉಳಿಸಿಕೊಂಡಿದ್ದಾರೆ..
* ಕಾಂಗ್ರೆಸ್ ಪಕ್ಷದ ಪ್ರಧಾನ ಕಛೇರಿಯ ಬಾಡಿಗೆ ಬಾಕಿ 12,69,902 ರೂಪಾಯಿಗಳು.
2012 ರ ಡಿಸೆಂಬರ್ ನಲ್ಲಿ ಕೊನೆಯ ಬಾರಿ ಬಾಡಿಗೆ ಪಾವತಿ ಮಾಡಿರುವುದು ಎಂದು ಹೇಳಲಾಗಿದೆ.
* ಸೋನಿಯಾ ಗಾಂಧಿಯವರ ನಿವೇಶನದ ಬಾಡಿಗೆ ಬಾಕಿ ಹಣ 4,610 ರೂಪಾಯಿಗಳು.
2020 ರ ಸೆಪ್ಟೆಂಬರ್ ಕೊನೆಯಬಾರಿ ಬಾಡಿಗೆ ನ ಪಾವತಿಸಿರುವುದು.
* ಸೋನಿಯಾ ಗಾಂಧಿಯವರ ಆಪ್ತ ಕಾರ್ಯದರ್ಶಿ ವಶಪಡಿಸಿಕೊಂಡಿರುವ ನವದೆಹಲಿಯ ಮನೆಯ ಬಾಕಿ ಹಣ 5,07,911 ರೂಪಾಯಿಗಳು.
2013 ರ ಆಗಸ್ಟ್ ನಲ್ಲಿ ಕೊನೆಯ ಬಾರಿ ಬಾಡಿಗೆ ಪಾವತಿ ಮಾಡಲಾಗಿದೆ.
* ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳಿಗೆ ವಾಸ್ತವ್ಯಕ್ಕೆ ಅವಕಾಶ ನೀಡುವ ವಸತಿ ನಿಯಮಗಳ ಪ್ರಕಾರ ಪ್ರತಿಯೊಂದು ಪಕ್ಷಕ್ಕೂ ತಮ್ಮದೇ ಆದ ಕಚೇರಿಯನ್ನು ನಿರ್ಮಿಸಲು ಮೂರು ವರ್ಷಗಳ ಕಾಲಾವಕಾಶ ನೀಡಲಾಗಿದೆ ನಂತರ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಬೇಕಾಗುತ್ತದೆ.
ನಿಯಮದ ಪ್ರಕಾರ ಕಾಂಗ್ರೆಸ್ ಪಕ್ಷ ಅಕ್ಬರ್ ರಸ್ತೆಯಲ್ಲಿರುವ ಕಚೇರಿ ಹಾಗೂ ಬಂಗಲೆಗಳನ್ನು ಖಾಲಿ ಮಾಡಬೇಕಾಗಿತ್ತು. ಆದರೆ ಕಾಂಗ್ರೆಸ್ ಪಕ್ಷ ವಾಸ್ತವ್ಯ ಮುಂದುವರಿಕೆಗಾಗಿ ಹಲವು ಬಾರಿ ಅವಧಿಯನ್ನು ವಿಸ್ತರಿಸಿಕೊಂಡಿರುವುದಾಗಿ ವರದಿ ವಿವರಿಸಿದೆ.
ಇದನ್ನು ಒದಿ : https://cnewstv.in/?p=8346
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv