Breaking News

ಹಿಜಾಬ್ – ಕೇಸರಿ ಶಾಲು ವಿವಾದ : ಪಾಕಿಸ್ತಾನ ಸರ್ಕಾರದ ಇಬ್ಬರು ಸಚಿವರಿಂದ ಟ್ವೀಟ್.

Cnewstv.in / 09.02.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಹಿಜಾಬ್ – ಕೇಸರಿ ಶಾಲು ವಿವಾದ : ಪಾಕಿಸ್ತಾನ ಸರ್ಕಾರದ ಇಬ್ಬರು ಸಚಿವರಿಂದ ಟ್ವೀಟ್.

ರಾಜ್ಯಾದ್ಯಂತ ಸುದ್ದಿಯಾಗಿರುವ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಇದೀಗ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯಾಗಿದ್ದು ಎಲ್ಲರ ಗಮನ ಸೆಳೆದಿದೆ.

ಹಿಜಾಬ್ ಮತ್ತು ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಇಮ್ರಾನ್ ಖಾನ್ ಸರ್ಕಾರದ ಇಬ್ಬರು ಸಚಿವರು ಟ್ಟೀಟ್ ಮೂಲಕ ಖಂಡಿಸಿದ್ದಾರೆ.

ವಿದೇಶಾಂಗ ಸಚಿವರಾದ ಶಾ ಮೊಹಮ್ಮದ್ ಖುರೇಷಿ ಹಾಗೂ ಮಾಹಿತಿ ಇಲಾಖೆಯ ಸಚಿವರಾಗಿರುವ ಫಾವದ್ ಚೌಧರಿ ಯವರು ಟ್ವೀಟ್ ಮೂಲಕ ಖಂಡಿಸಿದ್ದಾರೆ. ಸಚಿವವ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ಚರ್ಚೆಗೆ ಗ್ರಾಸವಾಗಿದೆ..

ಶಾ ಮೊಹಮ್ಮದ್ ಖುರೇಷಿ ಟ್ವೀಟ್ ಮಾಡಿ, ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣದಿಂದ ವಂಚಿತರಾಗುವುದು ಮೂಲಭೂತ ಮಾನವ ಹಕ್ಕುಗಳ ಘೋರ ಉಲ್ಲಂಘನೆಯಾಗಿದೆ. ಯಾರಿಗಾದರೂ ಈ ಮೂಲಭೂತ ಹಕ್ಕನ್ನು ನಿರಾಕರಿಸುವುದು ಮತ್ತು ಹಿಜಾಬ್ ಧರಿಸಿದ್ದಕ್ಕಾಗಿ ಅವರನ್ನು ಭಯಭೀತಗೊಳಿಸುವುದು ಸಂಪೂರ್ಣವಾಗಿ ದಬ್ಬಾಳಿಕೆಯಾಗಿದೆ. ಇದು ಮುಸ್ಲಿಮರ ಘೆಟ್ಟೋೀಕರಣದ ಭಾರತದ ರಾಜ್ಯ ಯೋಜನೆಯ ಭಾಗವಾಗಿದೆ ಎಂದು ಜಗತ್ತು ಅರಿತುಕೊಳ್ಳಬೇಕು ಎಂದಿದ್ದಾರೆ..

ಮಾಹಿತಿ ಇಲಾಖೆ ಸಚಿವರಾಗಿರುವ ಫಾವದ್ ಚೌಧರಿ ಟ್ವೀಟ್ ಮಾಡಿ, ಪ್ರಧಾನಿ ಮೋದಿಯವರ ಭಾರತದಲ್ಲಿ ಈಗೇನು ನಡೆಯುತ್ತಿದೆಯೋ ಅದು ಭಯಹುಟ್ಟಿಸುವಂತಿದೆ. ಅಸ್ಥಿರ ನಾಯಕತ್ವದಿಂದಾಗಿ ಭಾರತದ ಸಮಾಜ ಅತ್ಯಂತ ವೇಗವಾಗಿ ಅವನತಿಯಾಗುತ್ತಿದೆ. ಇತರ ನಾಗರಿಕರು ಉಳಿದ ಉಡುಪುಗಳನ್ನು ಧರಿಸುವುದು ಹೇಗೆ ಅವರ ವೈಯಕ್ತಿಕ ಆಯ್ಕೆಯೋ, ಹಿಜಾಬ್ ಧರಿಸುವುದೂ ಕೂಡ ಮುಸ್ಲಿಂ ಹೆಣ್ಣುಮಕ್ಕಳ ವೈಯಕ್ತಿಕ ಆಯ್ಕೆ ಎಂದು ಹೇಳಿದ್ದಾರೆ.

ಇದನ್ನು ಒದಿ : https://cnewstv.in/?p=8315

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*