Cnewstv.in / 03.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ನೂತನ ದಾಖಲೆ ನಿರ್ಮಿಸಿದ ಮಿಂಚು..
ವಾಷಿಂಗ್ಟನ್ : 2020ರಲ್ಲಿ ಅಮೆರಿಕದಲ್ಲಿ ಅಬ್ಬರಿಸಿದ ಎರಡು ಚಂಡಮಾರುತಗಳು ಎರಡು ಮಿಂಚಿನ ದಾಖಲೆ ನಿರ್ಮಿಸಿವೆ! ಹೌದು. ಅತಿ ಉದ್ದದ ಹಾಗೂ ಅತಿ ಹೆಚ್ಚು ಸಮಯ ಕಾಣಿಸಿಕೊಂಡ ಮಿಂಚು ದಾಖಲಾಗಿರುವುದು 2020ರಲ್ಲಿ.
2020ರ ಏಪ್ರಿಲ್ 29ರಂದು ಅಮೆರಿಕದಲ್ಲಿ ಕಾಣಿಸಿಕೊಂಡ ಮಿಂಚು ಬರೋಬ್ಬರಿ 477 ಮೈಲು ಅಂದರೆ 767 ಕಿ.ಮೀನಷ್ಟು ಉದ್ದವಿತ್ತು. ಟೆಕ್ಸಾಸ್‌ನಿಂದ ಮಿಸ್ಸಿಸ್ಸಪ್ಪಿವರೆಗೆ ಮಿಂಚು ಮಿಂಚಿತ್ತು.ಉ 2018ರಲ್ಲಿ ಬ್ರೆಜಿಲ್‌ನಲ್ಲಿ ಕಾಣಿಸಿಕೊಂಡ 709ಕಿ.ಮೀ ಉದ್ದದ ಮಿಂಚು ಬರೆದಿದ್ದ ದಾಖಲೆಯನ್ನು ಈ ಮಿಂಚು ಮುರಿದು, ಈವರೆಗಿನ ಅತ್ಯಂತ ಉದ್ದದ ಮಿಂಚಾಯಿತು.
ಹಾಗೆಯೇ ಅದೇ ವರ್ಷ ಜೂನ್ 18ರಂದು ದಕ್ಷಿಣ ಅಮೆರಿಕದ ಅರ್ಜೆಂಟಿನಾದ ಉರುಗ್ವೆಯಲ್ಲಿ ಮಿಂಚೊಂದು ಬರೋಬ್ಬರಿ 17.1 ಸೆಕೆಂಡುಗಳ ಕಾಲ ಕಾಣಿಸಿಕೊಂಡಿದೆ. ಇದು ಈವರೆಗಿನ ಅತಿ ಹೆಚ್ಚು ಸಮಯ ಕಾಣಿಸಿಕೊಂಡ ಮಿಂಚು. 2019ರ ಮಾರ್ಚ್‌ನಲ್ಲಿ ಅರ್ಜೆಂಟಿನಾದಲ್ಲಿ 16.73 ಸೆಕೆಂಡಿನ ಮಿಂಚು ಕಾಣಿಸಿಕೊಂಡಿತ್ತು.
(ಸಂಗ್ರಹ ಮಾಹಿತಿ)
ಇದನ್ನು ಒದಿ : https://cnewstv.in/?p=8163
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments