Cnewstv.in / 19.01.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ದಿವ್ಯ ಸುರೇಶ್ ಗೆ ರಸ್ತೆ ಅಪಘಾತ.
ಬೆಂಗಳೂರು : ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಖ್ಯಾತಿಯನ್ನು ಪಡೆದಿದ್ದ ದಿವ್ಯ ಸುರೇಶ್ ಗೆ ರಸ್ತೆ ಅಪಘಾತವಾಗಿದೆ.
ಕೊರೋನಾ ವ್ಯಾಕ್ಸಿನೇಷನ್ ಪಡೆದು ಬೈಕಿನಲ್ಲಿ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಘಟನೆ ನಡೆದಿದ್ದು ಸೋಮವಾರ ಆದರೆ ಮೂರು ದಿನಗಳ ನಂತರ ಈ ವಿಚಾರ ಬೆಳಕಿಗೆ ಬಂದಿದೆ. ದಿವ್ಯ ಸುರೇಶ್ ಅವರಿಗೆ ಯಾವುದೇ ಅಪಾಯವಾಗಿಲ್ಲ.
ದಿವ್ಯ ಸುರೇಶ್ ಅವರು ಬೈಕಿನಿಂದ ಬಿದ್ದ ಪರಿಣಾಮವಾಗಿ ಮುಖ ಹಾಗೂ ಮೂಗಿನ ಮೇಲೆ ಗಾಯಗಳಾಗಿದೆ. ಅಪಘಾತವಾದ ವಿಷಯವನ್ನ ದಿವ್ಯ ಸುರೇಶ್ ಅವರೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದಷ್ಟು ಬೇಗ ದಿವ್ಯಾ ಸುದೇಶ ಗುಣಮುಖರಾಗಲಿ ಎಂದು ಅಭಿಮಾನಿಗಳು ಹರಸಿದ್ದಾರೆ.
ಇದನ್ನು ಒದಿ : https://cnewstv.in/?p=7763
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv