Breaking News

ಕೊರೊನಾ : 1.47 ಲಕ್ಷ ಮಕ್ಕಳು ಅನಾಥ.

Cnewstv.in / 17.01.2022 / ನವದೆಹಲಿ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕೊರೊನಾ: 1.47 ಲಕ್ಷ ಮಕ್ಕಳು ಅನಾಥ.

ಹೊಸದಿಲ್ಲಿ: ಕಳೆದ ಎರಡು ವರ್ಷಗಳಲ್ಲಿ ದೇಶದಲ್ಲಿ ಮಹಾಮಾರಿ ಕೊರೋನ ಆರ್ಭಟಕ್ಕೆ ನಾವು ಸಾಕಷ್ಟು ಮಂದಿಯನ್ನು ಕಳೆದುಕೊಂಡಿದ್ದೇವೆ. ಉದ್ಯಮಿಗಳು, ರಾಜಕಾರಣಿಗಳು, ಸಿನಿಮಾ ನಟ ನಟಿಯರು ಸೇರಿದಂತೆ ನಮ್ಮ ಅಕ್ಕಪಕ್ಕದವರ ನಾವು ಕಳೆದುಕೊಂಡಿದ್ದೇವೆ. ಅಂತೆಯೇ ಅದೆಷ್ಟೋ ಮಕ್ಕಳು ತಮ್ಮ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

ಭಾರತಕ್ಕೆ ಕೊರೊನಾ ಅಪ್ಪಳಿಸಿದ ಅನಂತರ ಅಂದರೆ 2020, ಎಪ್ರಿಲ್ 1 ರಿಂದ 1,47,492 ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ. ಇನ್ನಿತರ ಕಾರಣಗಳಿಂದ ಪೋಷಕರಿಲ್ಲದ ಮಕ್ಕಳೂ ಈ ಪಟ್ಟಿಯಲ್ಲಿ ಸೇರಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣ ಆಯೋಗ ಸರ್ವೋಚ್ಚ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿದೆ.

ಮಕ್ಕಳ ರಕ್ಷಣೆ ವಿಚಾರದಲ್ಲಿ ಕಳವಳಗೊಂಡು ಸರ್ವೋಚ್ಚ ಪೀಠ ಸ್ವಪ್ರೇರಿತವಾಗಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಹಿನ್ನೆಲೆಯಲ್ಲಿ ಎನ್‌ಸಿಪಿಸಿಆರ್‌ ಈ ಮಾಹಿತಿ ನೀಡಿದೆ. ತನ್ನ ಬಾಲ ಸ್ವರಾಜ್‌ ವೆಬ್‌ಸೈಟ್‌ನಲ್ಲಿ ಜನವರಿ 11ರ ವರೆಗೆ ಸಲ್ಲಿಸಲ್ಪಟ್ಟಿರುವ ಮಾಹಿತಿ ಪ್ರಕಾರ, 10,094 ಮಕ್ಕಳು ಅನಾಥರಾಗಿದ್ದಾರೆ. 1,36,910 ಮಕ್ಕಳು ಅಪ್ಪ ಅಮ್ಮನ ಪೈಕಿ ಒಬ್ಬರನ್ನು ಕಳೆದುಕೊಂಡಿದ್ದಾರೆ. 488 ಮಕ್ಕಳು ಪೋಷಕರಿಂದ ತ್ಯಜಿಸಲ್ಪಟ್ಟಿದ್ದಾರೆ ಎಂದು ಎನ್‌ಸಿಪಿಸಿಆರ್‌ ಹೇಳಿದೆ.

ಇದನ್ನು ಒದಿ : https://cnewstv.in/?p=7741

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*