cnewstv.in /19.01.2022/ ಲಂಡನ್/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಲಂಡನ್ ಹೈಕೋರ್ಟ್ : ಐಶಾರಾಮಿ ಅರಮನೆಯಿಂದ ಹೊರಬರುವಂತೆ ಮಲ್ಯಗೆ ಸೂಚನೆ.
ಲಂಡನ್ : ತನ್ನ ಐಶಾರಾಮಿ ಅರಮನೆಯಿಂದಲೇ ಹೊರಬರುವಂತೆ ಭಾರತದ ವಿವಾದಿತ ಉದ್ಯಮಿ ವಿಜಯ್ ಮಲ್ಯಗೆ ಲಂಡನ್ ಕೋರ್ಟ್ ಶಾಕ್ ನೀಡಿದೆ.
ಲಂಡನಿನ ಪ್ರಮುಖ ಸ್ಥಳಗಳಲ್ಲಿರುವ ಮಲ್ಯರ ಐಷಾರಾಮಿ ನಿವಾಸಕ್ಕೆ ಸಂಬಂಧಿಸಿದಂತೆ ಕಾನೂನು ಸಮರದಲ್ಲಿ ವಿಜಯ್ ಮಲ್ಯ ಪರಾಭವಗೊಂಡಿದ್ದಾರೆ. ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಹಣಕಾಸಿನ ಅಕ್ರಮ ಪ್ರಕರಣವೊಂದರ ವಿಚಾರಣೆ ಅಂತ್ಯಗೊಂಡಿದ್ದು ತೀರ್ಪಿನ ಅನ್ವಯ ಬಹುಕೋಟಿ ರೂಪಾಯಿ ಮೌಲ್ಯದ ತಮ್ಮ ಮನೆಯನ್ನು ತೊರೆಯಬೇಕಿದೆ.
ವರ್ಚುವಲ್ ಸ್ವರೂಪದಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡಿದ ಹೈಕೋರ್ಟ್ ಚಾನ್ಸೆರಿ ವಿಭಾಗದ, ಡೆಪ್ಯೂಟಿ ಮಾಸ್ಟರ್ ಮ್ಯಾಥ್ಯೂ ಮಾರ್ಷ್ ಅವರು, ಯುಬಿಎಸ್ ಬ್ಯಾಂಕ್‌ಗೆ ನೀಡಬೇಕಾದ 20.4 ಮಿಲಿಯನ್ ಸಾಲ ಮರುಪಾವತಿಗೆ ಮಲ್ಯ ಮತ್ತು ಕುಟುಂಬ ಸದಸ್ಯರಿಗೆ ಇನ್ನಷ್ಟು ಕಾಲಾವಕಾಶ ನೀಡಲು ಯಾವುದೇ ಸಮರ್ಥನೆಯಿಲ್ಲ ಎಂದು ಹೇಳಿದರು.
ಲಂಡನ್‌ನಲ್ಲಿ 18/19 ಕಾರ್ನ್‌ವಾಲ್ ಟೆರೆಸ್ ಐಷರಾಮಿ ವಸತಿ ಸಮುಚ್ಚಯವು, ದುಬಾರಿಯಾಗಿದ್ದು, ನೂರಾರು ಮಿಲಿಯನ್ ಪೌಂಡ್‌ಗಳ ಮೌಲ್ಯದ್ದಾಗಿದೆ ಎಂದೂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಹಿಂದೆ ಕೋವಿಡ್ ನಿಯಮಗಳ ಕಾರಣದಿಂದಾಗಿ ಮಲ್ಯರನ್ನು ಹೊರಹಾಕಲು ಯುಬಿಎಸ್ ಗೆ ಸಾಧ್ಯವಾಗಿರಲಿಲ್ಲ. ಆದರೆ ಇಂದಿನ ತೀರ್ಪು ಯುಬಿಎಸ್ ಗೆ ಆಸ್ತಿಯನ್ನ ಮರು ಸ್ವಾಧೀನಪಡಿಸಿಕೊಳ್ಳಲು ದಾರಿಮಾಡಿಕೊಡುತ್ತದೆ.
ಇದನ್ನು ಓದಿ : https://cnewstv.in/?p=7719
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments