Cnewstv.in / 16.01.2022 / ಚೀನಾ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
32 ವೆಡ್ಡಿಂಗ್ ಡ್ರೆಸ್‌ಗಳನ್ನು ಕತ್ತರಿಸಿ, ಅಂಗಡಿಗೆ 10 ಲಕ್ಷ ರೂ. ನಷ್ಟ ಮಾಡಿದ ಮಹಿಳೆ.
ಬೀಜಿಂಗ್ : ಅಂಗಡಿಯವರ ಮೇಲಿನ ಸಿಟ್ಟಿಗೆ ಮಹಿಳೆಯೊಬ್ಬಳು ಅಂಗಡಿಯಲ್ಲಿದ್ದ 32 ವೆಡ್ಡಿಂಗ್ ಡ್ರೆಸ್‌ಗಳನ್ನು ಕತ್ತರಿಸಿ, ಅಂಗಡಿಗೆ 10 ಲಕ್ಷ ರೂ. ನಷ್ಟ ಮಾಡಿರುವ ಘಟನೆ ಚೀನದಲ್ಲಿ ನಡೆದಿದೆ.
ಮಹಿಳೆಯೊಬ್ಬಳು 1 ಲಕ್ಷ ರೂ.ಗೆ ವೆಡ್ಡಿಂಗ್ ಡ್ರೆಸ್ ಅನ್ನು ಆ ಅಂಗಡಿಯಲ್ಲಿ ಆರ್ಡರ್ ಮಾಡಿದ್ದಳಂತೆ. ಅದಕ್ಕಾಗಿ 40,000 ರೂ. ಮುಂಗಡ ಹಣ ವನ್ನೂ ಕೊಟ್ಟಿದ್ದಾಳೆ.
ಅನಂತರ ಆರ್ಡರ್ ಕ್ಯಾನ್ಸಲ್ ಮಾಡಿದ್ದಾಳೆ. ಆದರೆ ಮುಂಗಡ ಹಣ ಮರುಪಾವತಿ ಮಾಡಲಾಗದು ಎಂದು ಅಂಗಡಿಯವರು ಹೇಳಿದ್ದಾರೆ. ಸಿಟ್ಟಿನಿಂದ ಮಹಿಳೆ, ಅಂಗಡಿಯಲ್ಲಿದ್ದ 32 ವೆಡ್ಡಿಂಗ್ ಡ್ರೆಸ್‌ಗಳನ್ನು ಕತ್ತರಿಸಿದ್ದಾಳೆ.
ಇದನ್ನು ಒದಿ : https://cnewstv.in/?p=7634
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv