Cnewstv.in / 16.01.2022 / ಮಧ್ಯಪ್ರದೇಶ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಯುವತಿಯ ಕತ್ತು ಸೀಳಿದ ಗಾಳಿಪಟದ ದಾರ : ವಾಹನ ಸವಾರರೇ ಎಚ್ಚರ
ಮಧ್ಯಪ್ರದೇಶ : ಸಂಕ್ರಾಂತಿ ಹಬ್ಬದಂದು ಗಾಳಿಪಟ ಹಾರಿಸುವ ಪ್ರತೀತಿ ಇದೆ. ಅಂತೆಯೇ ಸಂಕ್ರಾಂತಿ ಹಬ್ಬಕ್ಕೆ ಹಾರಿಸಲಾದ ಗಾಳಿಪಟದ ದಾರದಿಂದ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಉಜ್ಜನಿ ನಗರದಲ್ಲಿ ನಡೆದಿದೆ.
ಸಂಕ್ರಾಂತಿ ಹಬ್ಬದಂದು ಸಂಜೆ ಯುವತಿ ಸ್ನೇಹಿತನೊಂದಿಗೆ ತನ್ನ ಸ್ಕೂಟರಿನಲ್ಲಿ ಬರುವಾಗ ಯಾರೋ ಹಾರಿಸಿಬಿಟ್ಟ ಗಾಳಿಪಟದ ದಾರವು ಅವಳ ಕುತ್ತಿಗೆಯನ್ನು ಸೀಳಿದೆ.
ಗಾಳಿಪಟದ ದಾರ ಚೈನೀಸ್ ಸ್ಟ್ರಿಂಗ್ ಆಗಿದ್ದರಿಂದ ಅಧಿಕ ರಕ್ತ ಸ್ರಾವವಾಗಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಚೈನೀಸ್ ಸ್ಟ್ರಿಂಗ್ ದಾರಕ್ಕೆ ಗಾಜಿನ ಪುಡಿಯನ್ನು ಲೇಪಿಸುತ್ತಾರೆ. ಆಕಾಶದಲ್ಲಿ ಹಾರುವ ಇತರ ಗಾಳಿಪಟವನ್ನು ಕತ್ತರಿಸಲು ಉಪಯೋಗಿಸಲಾಗುತ್ತದೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಗಾಳಿಪಟ ಹಾರಿಸುತ್ತಿದ್ದ ವ್ಯಕ್ತಿಗಾಗಿ ಶೋಧ ನಡೆಸುತ್ತಿದ್ದಾರೆ. ಅ ಭಾಗದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರತಿವರ್ಷ ಮಕರ ಸಂಕ್ರಾಂತಿಯಂದು ಈ ರೀತಿಯ ಪ್ರಕರಣಗಳು ವರದಿಯಾಗುತ್ತಿದೆ. ಗುಜರಾತ್ ನಲ್ಲಿ ಇದೇ ರೀತಿ ಗಾಳಿಪಟ ದಾರಕ್ಕೆ ಸಿಲುಕಿ ಗಾಯಗೊಂಡವರ ಸಂಖ್ಯೆ 451 ಕ್ಕೆ ಏರಿಕೆಯಾಗಿದೆ.
ಇದನ್ನು ಒದಿ : https://cnewstv.in/?p=7621
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv