Breaking News

ನಿವೃತ್ತ ಯೋಧರಿಗೆ ಪಿಂಚಣಿ ಸಮಸ್ಯೆ ನಿವಾರಿಸಲು ಆರಂಭಗೊಂಡಿದೆ ಹೊಸ ವೆಬ್‌ಸೈಟ್‌

Cnewstv.in / 14.01.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ನಿವೃತ್ತ ಯೋಧರಿಗೆ ಪಿಂಚಣಿ ಸಮಸ್ಯೆ ನಿವಾರಿಸಲು ಆರಂಭಗೊಂಡಿದೆ ಹೊಸ ವೆಬ್‌ಸೈಟ್‌

ನವದೆಹಲಿ : ನಿವೃತ್ತ ಯೋಧರಿಗೆ ಪಿಂಚಣಿ ಸಮಸ್ಯೆ ನಿವಾರಿಸಲು ಹೊಸ ವೆಬ್‌ಸೈಟ್‌ ಅನ್ನು ಆರಂಭಗೊಳ್ಳಿಸಲಾಗಿದೆ.

ನಿವೃತ್ತಿ ಹೊಂದಿದ ಯೋಧರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಪಿಂಚಣಿ ವಿಚಾರವಾಗಿ ಇರುವ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸುವ ನಿಟ್ಟಿನಲ್ಲಿ ವೆಬ್‌ಸೈಟ್‌ ಒಂದನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಇಂದು ಅನಾವರಣಗೊಳಿಸಿದ್ದಾರೆ.

ಈ ವ್ಯವಸ್ಥೆಯಿಂದಾಗಿ ಪಿಂಚಣಿಗೆ ಸಂಬಂಧಿಸಿದ ದೂರುಗಳನ್ನು ನೇರವಾಗಿ ನಿವೃತ್ತ ಸೈನಿಕರ ಕಲ್ಯಾಣ ವಿಭಾಗಕ್ಕೇ ಸಲ್ಲಿಕೆ ಮಾಡಿದಂತಾಗಲಿದೆ. ರಕ್ಷಣಾ ಸಚಿವರು “ನಿವೃತ್ತ ಸೈನಿಕರ ಪಿಂಚಣಿ ಸಂಬಂಧಿತ ಕುಂದು-ಕೊರತೆ ನಿವಾರಣೆಗೆ ವಿಶೇಷ ವೆಬ್‌ಸೈಟ್‌ ಅನ್ನು ಸಿದ್ಧಗೊಳಿಸಿ ಲೋಕಾರ್ಪಣೆ ಮಾಡಲಾಗಿದೆ ಎಂದು ಹೇಳಲು ಸಂತೋಷವಾಗುತ್ತದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ನಿವೃತ್ತ ಸೈನಿಕರ ಕಲ್ಯಾಣ ಇಲಾಖೆಗೆ 320 ಕೋಟಿ ರೂ. ಮೊತ್ತವನ್ನು ನೀಡಲಾಗಿದೆ. ಈ ಮೂಲಕ ಬಾಕಿ ಇರುವ ಪಿಂಚಣಿ ಮೊತ್ತವನ್ನು ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದೂ ರಾಜನಾಥ್‌ ಸಿಂಗ್‌ ಬರೆದುಕೊಂಡಿದ್ದಾರೆ.

ಇದನ್ನು ಒದಿ : https://cnewstv.in/?p=7594

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*