Breaking News

ಗಾಳಿಯಲ್ಲಿ ಕೊರೊನಾ ವೈರಾಣು ಹರಡುತ್ತಾ?? ಸಂಶೋಧಕರು ಹೇಳಿದೇನು ??

Cnewstv.in / 13.01.2022 / ಲಂಡನ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಗಾಳಿಯಲ್ಲಿ ಕೊರೊನಾ ವೈರಾಣು ಹರಡುತ್ತಾ?? ಸಂಶೋಧಕರು ಹೇಳಿದೇನು ??

ಲಂಡನ್: ಗಾಳಿಯಲ್ಲಿ ಕೊರೊನಾ ವೈರಾಣು ಒಬ್ಬರಿಂದ ಒಬ್ಬರಿಗೆ ಹರಡುವ ಸಾಮರ್ಥ್ಯವನ್ನು ಬೇಗನೆ ಕಳೆದುಕೊಳ್ಳುತ್ತದೆ ಎಂದು ನೂತನ ಅಧ್ಯಯನ ವರದಿ ತಿಳಿಸಿದೆ. ಗಾಳಿಯಲ್ಲಿ 20 ನಿಮಿಷಗಳಿಗೂ ಹೆಚ್ಚು ಕಾಲ ಇದ್ದರೆ ಶೇ.90ರಷ್ಟು ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ ಎನ್ನುವುದನ್ನು ವರದಿ ಬಹಿರಂಗ ಪಡಿಸಿದೆ.

ಗಾಳಿಯಲ್ಲಿ ಮೊದಲ 5 ನಿಮಿಷಗಳಲ್ಲಿಯೇ ಹೆಚ್ಚಿನ ಶಕ್ತಿಯನ್ನು ಕೊರೊನಾ ವೈರಾಣು ಕಳೆದುಕೊಳ್ಳುತ್ತದೆ. ವೆಂಟಿಲೇಷನ್ ಚೆನ್ನಾಗಿದ್ದ ಸ್ಥಳದಲ್ಲಿ ಕೊರೊನಾ ವೈರಾಣು ಹರಡುವ ಸಾಧ್ಯತ್ರೆ ತುಂಬಾ ಕಡಿಮೆ, ಮುಚ್ಚಿದ್ದ ಸ್ಥಳಗಳಲ್ಲಿ ಕೊರೊನಾ ವೈರಾಣು ಬೇಗನೆ ಹರಡುತ್ತದೆ ಎನ್ನುವ ಸಂಗತಿಯನ್ನು ಹೊಸ ಅಧ್ಯಯನ ದೃಢಪಡಿಸಿದೆ.

ಇಂಗ್ಲೆಂಡಿನ ಬ್ರಿಸ್ಟಾಲ್ ವಿವಿ ಸಂಶೋಧಕರು ಈ ಅಧ್ಯಯನದ ರೂವಾರಿಗಳು. ಗಾಳಿಯಲ್ಲಿ ಕೊರೊನಾ ವೈರಾಣು ಎಷ್ಟು ಕಾಲ ಕಾರ್ಯಶೀಲವಾಗಿರುತ್ತದೆ ಎನ್ನುವ ಸಂಶೋಧನೆಯಲ್ಲಿ ಸಂಶೋಧಕರ ತಂಡ ನಿರತವಾಗಿತ್ತು.

ಇದನ್ನು ಒದಿ : https://cnewstv.in/?p=7556

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*