Cnewstv.in / 12.01.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಇಂಡಿಯಾ ಓಪನ್ ಟೂರ್ನಿ : ಶುಭಾರಂಭ ಮಾಡಿದ ಪಿ.ವಿ. ಸಿಂಧು ಮತ್ತು ಅಶ್ಮಿತಾ ಚಾಲಿಹಾ.
ಹೊಸದಿಲ್ಲಿ: ಕೊರೊನಾ ಕಾರಣದಿಂದ ಎರಡು ಬಾರಿ ರದ್ದುಗೊಂಡಿದ್ದ “ಇಂಡಿಯಾ ಓಪನ್ ಟೂರ್ನಿ’ ನಿನ್ನೆ ಆರಂಭಗೊಂಡಿದೆ.
ಪಿ.ವಿ. ಸಿಂಧು ಮತ್ತು ಭಾರತದ ಯುವ ಶಟ್ಲರ್ ಅಶ್ಮಿತಾ ಚಾಲಿಹಾ ಶುಭಾರಂಭ ಮಾಡಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿ ಯಾವುದೇ ಶ್ರೇಯಾಂಕ ಹೊಂದಿಲ್ಲದ ಗುವಾಹಟಿಯ ಅಶ್ಮಿತಾ ರಶ್ಯದ 5ನೇ ಶ್ರೇಯಾಂಕದ ಯವೆYàನಿ ಕೊಸೆಸ್ಕಾಯಾ ಅವರನ್ನು 24-22, 21-16 ನೇರ ಗೇಮ್‌ಗಳಿಂದ ಮಣಿಸಿ ಅಚ್ಚರಿಯ ಫಲಿತಾಂಶ ದಾಖಲಿಸಿದರು.
ಮತ್ತೂಂದು ಪಂದ್ಯದಲ್ಲಿ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ, ಅಗ್ರ ಶ್ರೇಯಾಂಕದ ಪಿ.ವಿ. ಸಿಂಧು ಭಾರತೀಯ ಎದುರಾಳಿ ಶ್ರೀಕೃಷ್ಣಪ್ರಿಯಾ ಕುದರವಳ್ಳಿ ವಿರುದ್ಧ 21-5, 21-16 ಅಂತರದಿಂದ ಮೇಲುಗೈ ಸಾಧಿಸಿದರು.
ಇದನ್ನು ಒದಿ : https://cnewstv.in/?p=7494
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv