Cnewstv.in / 04.01.2022 / ಪಂಜಾಬ್/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಗಂಡ ಮನೆಯಲ್ಲಿಲ್ಲದಾಗ ಅತ್ತೆ ಮಾವನನ್ನು ಕೊಂದು, ಸುಟ್ಟು ಹಾಕಿದ ಸೊಸೆ.
ಪಂಜಾಬ್ : ಗಂಡ ಮನೆಯಲ್ಲಿ ಇಲ್ಲದ ಸಮಯದಲ್ಲಿ ಸೊಸೆ ವೃದ್ಧ ಅತ್ತೆ-ಮಾವ ನನ್ನ ಕೊಂದು ಸುಟ್ಟು ಹಾಕಿದ ಘಟನೆ ಪಂಜಾಬ್ ನ ಹೋಶಿಯಾರ್ ಪುರ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಮಂಜಿತ್ ಸಿಂಗ್ ಮತ್ತು ಅವರ ಪತ್ನಿ ಗುಮೀತ್ ಕೌರ್ ಎಂದು ಗುರುತಿಸಲಾಗಿದೆ. ಮೃತರ ಸೊಸೆಗೆ ಮದುವೆಯ ನಂತರ ಪರಪುರುಷನೊಂದಿಗೆ ಗೆಳೆತನವಾಗಿತ್ತು. ನಂತರ ಗೆಳೆತನ ಪ್ರೀತಿಯಾಗಿ ಮಾರ್ಪಟ್ಟಿತ್ತು. ಸೊಸೆಯ ಅಕ್ರಮ ಸಂಬಂಧಕ್ಕೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು ಹಾಗೂ ಈ ವಿಚಾರವನ್ನು ಮಗನ ಬಳಿ ಸಹ ಹೇಳಿದ್ದರು.
ಇದೇ ವಿಚಾರಕ್ಕೆ ತನ್ನ ಅತ್ತೆ ಮಾವನ ಮೇಲೆ ಕೋಪಗೊಂಡಿದ್ದ ಸೊಸೆ, ತನ್ನ ಗಂಡ ಮನೆಯಲ್ಲಿ ಇಲ್ಲದ ಸಮಯದಲ್ಲಿ ಪ್ರಿಯಕರನ ಜೊತೆ ಸೇರಿ ಅತ್ತೆ-ಮಾವನನ್ನು ಕೊಲೆ ಮಾಡಿ ನಂತರ ಹೆಣವನ್ನು ಸುಟ್ಟು ಹಾಕಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಸೊಸೆ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.
ಒಟ್ಟಿನಲ್ಲಿ ತನ್ನ ಪ್ರಿಯಕರನಿಗಾಗಿ ಅತ್ತೆ ಮಾವನನ್ನು ಕೊಂದು ಸುಟ್ಟು ಹಾಕಿದ್ದಾಳೆ. ಪ್ರೀತಿಗಾಗಿ ತ್ಯಾಗ ಮಾಡುವುದನ್ನು ನೋಡಿದ್ದೇವೆ ಆದರೆ ಇಲ್ಲಿ ಪ್ರೀತಿಗಾಗಿ ಈ ರೀತಿಯ ಕೃತ್ಯವನ್ನು ಮಾಡಿದ್ದಾರೆ.
ಇದನ್ನು ಒದಿ : https://cnewstv.in/?p=7343
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv