Breaking News

ಅಮೆರಿಕಾ : ಒಂದೇ ದಿನ 10 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ.

Cnewstv.in / 04.01.2022 / ಅಮೆರಿಕಾ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಅಮೆರಿಕಾ : ಒಂದೇ ದಿನ 10 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ

ವಾಷಿಂಗ್ಟನ್: ಅಮೆರಿಕದಲ್ಲಿ ಓಮಿಕ್ರಾನ್ ದಿನೇ ದಿನೇ ಹೆಚ್ಚಳವಾಗುತ್ತಿರುವುದರ ನಡುವೆಯೇ ನಿನ್ನೆ ಒಂದೇ ದಿನ 10 ಲಕ್ಷಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ವರದಿಯಾಗಿದೆ.

ಈ ಹಿಂದಿನ ಒಂದು ಮತ್ತು ಎರಡನೇ ಅಲೆಗಿಂತ ಮೂರು ಪಟ್ಟು ವೇಗವಾಗಿ ಅಮೆರಿಕದಲ್ಲಿ ಓಮಿಕ್ರಾನ್ ಹಬ್ಬುತ್ತಿದ್ದು, ನಿನ್ನೆ ಒಂದೇ ದಿನ 1 ಮಿಲಿಯನ್ ಗೂ ಅಧಿಕ ಕೊರೋನಾ ವೈರಸ್ ಕೇಸುಗಳು ಪತ್ತೆಯಾಗಿದೆ ಎಂದು ಯುಎಸ್ ಎ ಟುಡೇ ವರದಿ ಮಾಡಿದೆ.

ಕಳೆದೊಂದು ವಾರದಲ್ಲಿ ಪ್ರತಿ 100 ಅಮೆರಿಕನ್ನರಲ್ಲಿ ಒಬ್ಬರಲ್ಲಿ ಕೊರೋನಾ ಸೋಂಕು ಕಂಡುಬಂದಿದೆ ಎಂದು ಜಾನ್ಸ್ ಹಾಪ್ ಕಿನ್ಸ್ ಯೂನಿವರ್ಸಿಟಿ ವರದಿ ಮಾಡಿದೆ. ಓಮಿಕ್ರಾನ್ ಮತ್ತು ಕೊರೋನಾ ಇಷ್ಟೊಂದು ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಶ್ವೇತಭವನದ ಕೊರೋನಾ ವೈರಸ್ ನಿರ್ವಹಣಾ ತಂಡವನ್ನು ಭೇಟಿ ಮಾಡಿ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಚರ್ಚೆ ನಡೆಸಲಿದ್ದಾರೆ.

ನಿನ್ನೆ ಸಾಯಂಕಾಲ 7.30ರ ಹೊತ್ತಿಗೆ ಜಾನ್ಸ್ ಹಾಪ್ಕಿನ್ಸ್ ಯೂನಿವರ್ಸಿಟಿ ಅಂಕಿಅಂಶ ಪ್ರಕಾರ, 10 ಲಕ್ಷಕ್ಕೂ ಅಧಿಕ ಕೊರೋನಾ ಪಾಸಿಟಿವ್ ನಿನ್ನೆ ಒಂದೇ ದಿನದಲ್ಲಿ ವರದಿಯಾಗಿದ್ದು ಎಲ್ಲಾ ರಾಜ್ಯಗಳಿಂದ ಅಷ್ಟು ಹೊತ್ತಿಗೆ ಅಂಕಿಅಂಶ ಸಿಕ್ಕಿದೆಯೇ ಎಂಬ ಬಗ್ಗೆ ಮಾಹಿತಿಯಿಲ್ಲ.

ಮೊನ್ನೆ ಭಾನುವಾರ ಒಂದೇ ದಿನ ಅಮೆರಿಕದಲ್ಲಿ 5 ಲಕ್ಷಕ್ಕೂ ಅಧಿಕ ಕೊರೋನಾ ಪಾಸಿಟಿವ್ ಕೇಸು ದಾಖಲಾಗಿತ್ತು. ಇದುವರೆಗೆ ಅಮೆರಿಕದಲ್ಲಿ 55 ಮಿಲಿಯನ್ ಗಿಂತಲೂ ಅಧಿಕ ಕೊರೋನಾ ಪಾಸಿಟಿವ್ ಕೇಸುಗಳು ವರದಿಯಾಗಿವೆ. ಅಂದರೆ ಪ್ರತಿ ಆರು ಜನರಲ್ಲಿ ಒಬ್ಬರಿಗೆ ಬಂದಂತೆ ಆಗಿದೆ. ಇದುವರೆಗೆ ದೇಶದಲ್ಲಿ 8 ಲಕ್ಷದ 26 ಸಾವಿರಕ್ಕೂ ಅಧಿಕ ಸಾವುಗಳು ಸಂಭವಿಸಿವೆ.

ಈ ಮಧ್ಯೆ ಅಲ್ಲಿನ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ 12ರಿಂದ 15 ವರ್ಷದ ಮಕ್ಕಳಿಗೆ ಫೈಜರ್-ಬಯೋಂಟೆಕ್ ಕೊರೋನಾ ವೈರಸ್ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಸಲು ಅನುಮತಿ ನೀಡಿದೆ.

ಇದನ್ನು ಒದಿ : https://cnewstv.in/?p=7339

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*