Breaking News

Texas : ಅಮೆರಿಕದಲ್ಲಿ ಮೀನಿನ ಮಳೆ !! ವೀಡಿಯೋ ಸಿಕ್ಕಾಪಟ್ಟೆ ವೈರಲ್..

Cnewstv.in / 02.01.2022 / ಅಮೇರಿಕಾ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Texas : ಅಮೆರಿಕದಲ್ಲಿ ಮೀನಿನ ಮಳೆ !! ವೀಡಿಯೋ ಸಿಕ್ಕಾಪಟ್ಟೆ ವೈರಲ್..

ಟೆಕ್ಸಾಸ್‌: ಮಳೆಯೊಂದಿಗೆ ಆಲಿಕಲ್ಲು ಬೀಳುವುದನ್ನು ನೋಡಿರುತ್ತೀರಿ. ಆದರೆ ಅಮೆರಿಕದ ಟೆಕ್ಸಾಸ್‌ನಲ್ಲಿ ಮಳೆಯೊಂದಿಗೆ ಮೀನುಗಳೂ ಬಿದ್ದಿವೆ. ಇಲ್ಲಿ ಮೀನಿನ ಮಳೆಯಾಗಿರುವುದಾಗಿ ಟೆಕ್ಸಾಸ್‌ ನಗರದ ಅಧಿಕೃತ ಫೇಸ್ಬುಕ್ ಖಾತೆಯು ಬುಧವಾರ “ಪ್ರಾಣಿಯ ಮಳೆ” ಬಗ್ಗೆ ಎಚ್ಚರಿಕೆಯನ್ನು ನಿವಾಸಿಗಳೊಂದಿಗೆ ಹಂಚಿಕೊಂಡಿದೆ.

ಪ್ರಾಣಿಗಳ ಮಳೆಯು ಒಂದು ವಿದ್ಯಮಾನವಾಗಿದ್ದು, ಭೂಪ್ರದೇಶದಲ್ಲಿ ಸಂಭವಿಸುವ ಸುಂಟರಗಾಳಿ ಅಥವಾ ಬಿರುಗಾಳಿಯು ನೀರಿರುವ ಪ್ರದೇಶದಲ್ಲಿ ಸಂಭವಿಸಿದಾಗ ಸಣ್ಣ ಪುಟ್ಟ ಮೀನು, ಕಪ್ಪೆಗಳು, ಏಡಿಗಳು ಮತ್ತು ಸಣ್ಣ ಮೀನುಗಳಂತಹ ಸಣ್ಣ ನೀರಿನ ಪ್ರಾಣಿಗಳು, ಮತ್ತಿತರ ಜಲಚರಗಳು ಆಗಸ ಸೇರುವ ಸಾಧ್ಯತೆಯಿರುತ್ತದೆ. ಮತ್ತೆ ಮಳೆಯಾದಾಗ ಈ ರೀತಿ ಮೇಲೆ ಸೇರಿದ್ದ ಜಲಚರಗಳು ವಾಪಸು ಭೂಮಿಗೆ ಬೀಳುತ್ತವೆ ಎಂದು ತಿಳಿಸಲಾಗಿದೆ. ಇದು ಅಸಾಮಾನ್ಯವಾಗಿದ್ದರೂ, ಇದು ಸಂಭವಿಸುತ್ತದೆ, ಇಂದು ಟೆಕ್ಸರ್ಕಾನಾದ ಹಲವಾರು ಸ್ಥಳಗಳಲ್ಲಿ ಸಾಕ್ಷಿಯಾಗಿದೆ.

ಮೀನುಗಳ ಮಳೆ ಬೀಳುತ್ತಿರುವುದು ಇದೇ ಮೊದಲೇನಲ್ಲ, 2017ರಲ್ಲಿ ಕ್ಯಾಲಿಪೋರ್ನಿಯಾದಲ್ಲಿ ಪ್ರಾಥಮಿಕ ಶಾಲೆಯೊಂದರ ಮೇಲೆ ನೂರಾರು ಮೀನುಗಳು ಮಳೆಯಂತೆ ಬಿದ್ದ ಘಟನೆ ವರದಿಯಾಗಿತ್ತು. ಅಲ್ಲದೆ ಕಪ್ಪೆಗಳ ಮಳೆ ಬಿದ್ದಿದ್ದರ ಬಗ್ಗೆಯೂ ಈ ಹಿಂದೆ ವರದಿಯಾಗಿತ್ತು. ಇದೀಗ ಮೀನಿನ ಮಳೆ ಟೆಕ್ಸಾಸ್ ಜನತೆಯನ್ನು ಅಚ್ಚರಿಗೊಳಿಸಿದೆ. 4ರಿಂದ 5 ಇಂಚಿನ ಬಿಳಿ ಬಣ್ಣದ ಮೀನುಗಳು ದಾರಿಯ ಮಧ್ಯೆ ಅಲ್ಲಲ್ಲಿ ಬಿದ್ದಿರುವುದನ್ನು ಕಾಣಬಹುದು. ಇದರ ವೀಡಿಯೋ ಈಗ ಜಗತ್ತಿನಾದ್ಯಂತ ವೈರಲ್ ಆಗಿದೆ.

ಇದನ್ನು ಒದಿ : https://cnewstv.in/?p=7313

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*