Breaking News

ತಿರುಪತಿಯ ಈ ಸೇವೆ ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ಧಾರ್ಮಿಕ ಸೇವೆ.‌

Cnewstv.in / 02.01.2022 / ತಿರುಪತಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ತಿರುಪತಿಯ ಈ ಸೇವೆ ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ಧಾರ್ಮಿಕ ಸೇವೆ.‌

ತಿರುಪತಿ : ತಿರುಮಲನಿಗೆ ವಿಶ್ವಾದ್ಯಂತ ಭಕ್ತರಿದ್ದಾರೆ. 300 ರೂಪಾಯಿ ಪಾವತಿಸಿ ತಿರುಪತಿಯ ತಿಮ್ಮಪ್ಪನ ದರ್ಶನವನ್ನೂ ಪಡೆಯುವುದರಿಂದ ಹಿಡಿದು, ಸಾವಿರದಿಂದ ಲಕ್ಷಗಟ್ಟಲೆಯವರೆಗೂ ಸೇವೆ ಮಾಡಿಸುವುದನ್ನು ನೋಡಿದ್ದೇವೆ. ಆದರೆ ಇದೀಗ ತಿರುಪತಿ-ತಿರುಮಲ ಆಡಳಿತ ಮಂಡಳಿಯು (TTD) ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ಧಾರ್ಮಿಕ ಸೇವೆಯನ್ನು ಪರಿಚಯಿಸಲು ಮುಂದಾಗಿದೆ.

ಹೌದು ತಿರುಪತಿ ಆಡಳಿತ ಮಂಡಳಿಯು ಪರಿಚಯಿಸುತ್ತಿರುವ “ಉದಯಾಸ್ತಮಾನ” ಸೇವೆಗೆ ತಗುಲುವ ವೆಚ್ಚ ಬರೋಬ್ಬರಿ 1 ಕೋಟಿಯಿಂದ 1.5 ಕೋಟಿ ರೂಪಾಯಿಗಳು. “ಉದಯಾಸ್ತಮಾನ” ಈ ಸೇವೆ ಮಾಡಿಸಲು ಭಕ್ತರು ಬರೋಬ್ಬರಿ ಒಂದು ಕೋಟಿ ಇದ್ದ ಒಂದೂವರೆ ಕೋಟಿ ರೂಪಾಯಿಗಳನ್ನು ನೀಡಬೇಕಾಗುತ್ತದೆ.

ಉದಯಾಸ್ತಮಾನ ಸೇವೆಯ ವಿವರ :

ಕೋಟಿ ರೂಪಾಯಿ ಪಾವತಿಸಿ, ಉದಯಾಸ್ತಮಾನ ಸೇವೆ ಮಾಡಿಸುವ ಭಕ್ತರು ಮತ್ತು ಅವರ ಕುಟುಂಬದ ಐವರು ಸದಸ್ಯರು ಗರ್ಭಗುಡಿಯ ಸಮೀಪ ಮತ್ತು ಇತರೆ ನಿರ್ದಿಷ್ಟ ಪ್ರದೇಶಗಳಲ್ಲಿ ಇಡೀ ದಿನ ಕುಳಿತು ಬೆಳಗ್ಗಿನ ಸುಪ್ರಭಾತಂನಿಂದ ಹಿಡಿದು ಸಂಜೆಯ ಏಕಾಂತ ಸೇವೆಯವರೆಗೆ ತಿಮ್ಮಪ್ಪನಿಗೆ ಸಲ್ಲುವ ಎಲ್ಲ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ವೀಕ್ಷಿಸಬಹುದು. ಇತರೆ ದಿನಗಳಲ್ಲಿ ಈ ಸೇವೆಗೆ 1 ಕೋಟಿ ರೂ. ಇದ್ದರೆ, ಶುಕ್ರವಾರ ಮಾತ್ರ ಅಭಿಷೇಕಂ ಕೂಡ ನೋಡಲು ಅವಕಾಶವಿರುವ ಕಾರಣ, ಇದರ ಮೊತ್ತ ಒಂದೂವರೆ ಕೋಟಿ ರೂ. ಆಗಲಿದೆ ಎಂದು ಹೇಳಲಾಗಿದೆ.

ಎಷ್ಟು ಮಂದಿಗೆ ಅವಕಾಶ ಕಲ್ಪಿಸುವುದು, ಎಷ್ಟು ವರ್ಷಗಳ ಕಾಲ ಈ ಸೇವೆ ನೀಡುವುದು ಎಂಬ ಬಗ್ಗೆ ಅಂತಿಮ ನಿರ್ಧಾರವನ್ನು ಸದ್ಯದಲ್ಲೇ ಕೈಗೊಳ್ಳಲಾಗುವುದು. ಇದರಿಂದ ಬರುವ ಮೊತ್ತವನ್ನು ಸಂಪೂರ್ಣವಾಗಿ ಸೂಪರ್‌ ಸ್ಪೆಷಾಲಿಟಿ ಮಕ್ಕಳ ಹೃದ್ರೋಗ ಆಸ್ಪತ್ರೆಯ ನಿರ್ಮಾಣಕ್ಕೆ ಬಳಸಲಾಗುವುದು ಎಂದು ಟಿಟಿಡಿ ಹೇಳಿದೆ.

ಈ ಹಿಂದೆಯೂ ಅಂದರೆ 80ರ ದಶಕದಲ್ಲೂ ಉದಯಾಸ್ತಮಾನ ಸೇವೆ ನೀಡಲಾಗುತ್ತಿತ್ತು. ಅದರ ಆರಂಭಿಕ ದರ 1 ಲಕ್ಷ ರೂ. ಆಗಿತ್ತು. ಬಳಿಕ ಅದನ್ನು 10 ಲಕ್ಷ ರೂ.ಗೆ ಏರಿಸಲಾಯಿತು. ಸ್ಥಳಾವಕಾಶದ ಕೊರತೆ ಮತ್ತಿತರ ಕಾರಣಗಳಿಂದಾಗಿ 2010ರಲ್ಲಿ ಈ ಸೇವೆ ಸ್ಥಗಿತಗೊಳಿಸಲಾಯಿತು ಎಂದೂ ಟಿಟಿಡಿ ಹೇಳಿದೆ.

ಇದನ್ನು ಒದಿ : https://cnewstv.in/?p=7308

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*