Cnewstv.in / 02.01.2022 / ನವದೆಹಲಿ – ಮಹಾರಾಷ್ಟ್ರ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
10 ಸಚಿವರು, 20 ಶಾಸಕರಿಗೆ ವಕ್ಕರಿಸಿದ ಕೊರೊನಾ, ರಾಷ್ಟ್ರ ರಾಜಧಾನಿಯಲ್ಲಿ ಪಾಸಿಟಿವಿಟಿ ದರ 3.64ಕ್ಕೆ ಏರಿಕೆ.
ನವದೆಹಲಿ / ಮಹಾರಾಷ್ಟ್ರ : ದೇಶದಲ್ಲಿ 10 ಸಾವಿರದ ಒಳಗೆ ಬರುತ್ತಿದ್ದ ಕೊರೋನಾ ಪ್ರಕರಣ ಸಂಖ್ಯೆ ಇದೀಗ ದಿಢೀರ್ ಅಂತಾ ವೇಗದ ಗತಿಯಲ್ಲಿ ಹೆಚ್ಚಾಗುತ್ತಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 9,170 ಹಾಗೂ ದೆಹಲಿಯಲ್ಲಿ 2,176 ಪ್ರಕರಣಗಳು ಪತ್ತೆಯಾಗಿದೆ.
ದೆಹಲಿಯಲ್ಲಿ 2,716 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದ್ದು, ಇದು ಕಳೆದ ಮೇ ನಂತರದ ಅತೀ ಹೆಚ್ಚು ಪ್ರಕರಣವಾಗಿದೆ. ಇನ್ನು ರಾಷ್ಟ್ರ ರಾಜಧಾನಿಯಲ್ಲಿ ಪಾಸಿಟಿವಿಟಿ ದರ 3.64ಕ್ಕೆ ಏರಿಕೆಯಾಗಿದೆ. ಕಳೆದ ಗುರುವಾರ 1,313 ಹಾಗೂ ಶುಕ್ರವಾರ 1,796 ಪ್ರಕರಣ ವರದಿಯಾಗಿತ್ತು.
ಇನ್ನು ಮಹಾರಾಷ್ಟ್ರದಲ್ಲೂ ಕೊರೋನಾ ಪ್ರಕರಣಗಳು ಏರುಗತಿಯಲ್ಲಿ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದಲ್ಲಿ 9,170 ಪ್ರಕರಣ ಪತ್ತೆಯಾಗಿದ್ದು, ಮುಂಬೈನಲ್ಲೇ 6,347 ಕೊರೋನಾ ಪ್ರಕರಣ ವರದಿಯಾಗಿದೆ.
ಇನ್ನು ಮಹಾರಾಷ್ಟ್ರದಲ್ಲಿ ಬರೋಬ್ಬರಿ 10 ಸಚಿವರು, 20 ಶಾಸಕರಿಗೂ ಕೊರೋನಾ ವಕ್ಕರಿಸಿದೆ. ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಗೂ ಕೊರೋನಾ ಬಂದಿದ್ದು ಡಿಸಿಎಂ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಪವಾರ್, ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಕಠಿಣ ನಿರ್ಬಂಧಗಳನ್ನ ಜಾರಿಗೊಳಿಸಲಾಗುವುದು. ಒಮಿಕ್ರಾನ್, ಕೋವಿಡ್ ಬಗ್ಗೆ ಎಚ್ಚರದಿಂದ ಇರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಮಹಾರಾಷ್ಟ್ರದಲ್ಲಿಯೂ ಮುಂಬಯಿ ಮತ್ತು ಪುಣೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ರಾಜ್ಯದಲ್ಲಿ ಇನ್ನಷ್ಟು ಕಠಿಣ ನಿರ್ಬಂಧ ಜಾರಿಗೊಳಿಸುವ ಸಾಧ್ಯತೆ ಇದೆ, ಒಂದು ವೇಳೆ ಕಠಿಣ ನಿರ್ಬಂಧ ಜಾರಿಗೊಳಿಸಬಾರದು ಎಂಬ ಇಚ್ಚೆ ಇದ್ದರೆ, ಜನರು ಕೋವಿಡ್ ನಿರ್ಬಂಧವನ್ನು ಪಾಲಿಸಲೇಬೇಕು ಎಂದು ಹೇಳಿದರು.
ಇದನ್ನು ಒದಿ : https://cnewstv.in/?p=7305
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv