Cnewstv.in / 31.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮೊಬೈಲ್ ಕದ್ದು ಮಾರುತ್ತಿದ್ದ ಆರೋಪಿ ಬಂಧನ, 55 ವಿವಿಧ ಕಂಪನಿಯ ಮೊಬೈಲ್ ಫೋನ್ ವಶ.
ಶಿವಮೊಗ್ಗ : ಕಳ್ಳತನದಿಂದ ತಂದಿದ್ದ ಮೊಬೈಲ್ ಫೋನ್ ಹಂಚಿಕೊಳ್ಳುತ್ತಿದ್ದ ಆರೋಪಿಯನ್ನು ಭದ್ರಾವತಿಯ ಪೊಲೀಸರು ಬಂಧಿಸಿದ್ದಾರೆ.
ಹೊಸಮನೆ ಠಾಣಾ ವ್ಯಾಪ್ತಿಯ ಸಂತೆ ಮೈದಾನದಲ್ಲಿ ಮೂವರು ಆರೋಪಿಗಳು ಕಳ್ಳತನದಿಂದ ತಂದಿರುವ ಮೊಬೈಲ್ ಫೋನ್ಗಳನ್ನು ಹಂಚಿಕೊಳ್ಳುತ್ತಿದ್ದರು ಎಂಬ ಖಚಿತ ಮಾಹಿತಿಯ ಮೇರೆಗೆ ಡಿವೈಎಸ್ ಪಿ(ಪ್ರೋ) ಪ್ರಭಾಕರ್ ಹಾಗೂ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಸಯ್ಯದ್ ಅಲ್ವಿ (25) ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ಇಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿ ತಂದಿರುವ 55 ವಿವಿಧ ಕಂಪನಿಯ ಮೊಬೈಲ್ ಗಳನ್ನು ಹಂಚಿಕೊಳ್ಳುತ್ತಿದ್ದರು. ಇದರ ಅಂದಾಜು ಮೌಲ್ಯ 6,68,400 ರೂಪಾಯಿಗಳು. ಆರೋಪಿಗಳ ವಿರುದ್ಧ ಗುನ್ನೆ ಸಂಖ್ಯೆ 130/2021 ಕಲಂ 41(b), 102 Crpc, 379 IPC ಕೃತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಇದನ್ನು ಒದಿ : https://cnewstv.in/?p=7290
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399