Cnewstv | 07.07.2025 | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ರೇಣುಕಾಸ್ವಾಮಿ ರೀತಿ ಕಲಬುರಗಿಯಲ್ಲಯೂ ಕಿಡ್ನಾಪ್ ಮಾಡಿ ಹತ್ಯೆ: ವ್ಯಕ್ತಿ ಕೊಲೆ ಹಿಂದೆ ಹಳೇ ಲವರ್ ಗ್ಯಾಂಗ್.
ಕಲಬುರಗಿ : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಂತೆ (Renukaswamy Murder Case) ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದ್ದು, ಇದೀಗ ಕಲಬುರಗಿಯಲ್ಲೂ (Kalaburagi) ಸಹ ನಡೆದಿರುವುದು ಬೆಳಕಿಗೆ ಬಂದಿದೆ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ನಟ ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಬಳಿಕ ಬೆಂಗಳೂರಿಗೆ ಕರೆತಂದು ಹಲ್ಲೆ ಮಾಡಿ ಕೊಲೆ ಮಾಡಿತ್ತು. ಅದೇ ಮಾದರಿಯಲ್ಲಿ ಕಲಬುರಗಿಯಲ್ಲಿ ಕಿರುಕುಳ ನೀಡುತ್ತಿದ್ದಾನೆಂದು ರಾಘವೇಂದ್ರ ನಾಯಕ್ (39) ಎನ್ನುವಾತನನ್ನು ಹಳೇ ಲವರ್ ಅಶ್ವಿನಿ ಆ್ಯಂಡ್ ಗ್ಯಾಂಗ್ ಮಾರ್ಚ್ 12ರಂದು ಕಿಡ್ನಾಪ್ ಮಾಡಿ ಬಳಿಕ ಹತ್ಯೆ ಮಾಡಿರುವ ಆಘಾತಕಾರಿ ಕೃತ್ಯವೊಂದು ಆ ಪ್ರಕರಣವನ್ನು ಮತ್ತೆ ನೆನಪಿಸಿದೆ.
ಕಿರುಕುಳ ನೀಡಿದ್ದಾನೆಂದು ಆರೋಪಿಸಿ ಅಶ್ವಿನಿ ಹಾಗೂ ಆಕೆಯ ಪ್ರಿಯಕರ ಆ್ಯಂಡ್ ಗ್ಯಾಂಗ್ ಕಲಬುರಗಿ ನಗರದ ರಾಘವೇಂದ್ರ ನಾಯಕ್ (39) ಎನ್ನುವಾತನ್ನು ಅಪಹರಿಸಿ ಕೀರ್ತಿ ನಗರದಲ್ಲಿರುವ ಸ್ಮಶನಕ್ಕೆ ಕರೆದೊಯ್ದಿದ್ದು, ಬಳಿಕ ರಾಘವೇಂದ್ರನ ಖಾಸಗಿ ಅಂಗಕ್ಕೆ ಹಲ್ಲೆ ಮಾಡಿ ಬಳಿಕ ಬರ್ಬರವಾಗಿ ಕೊಲೆ ಮಾಡಿದೆ. ಈ ಸಂಬಂಧ ಕಿಡ್ನ್ಯಾಪ್ ತನೀಖೆ ಮಾಡುತ್ತಿದ್ದ ಪೊಲೀಸರಿಗೆ ಬೆಚ್ಚಿ ಬಿಳಿಸೋ ಈ ಅಂಶ ಬಯಲಿಗೆ ಬಂದಿದೆ.
ಅಶ್ವಿನಿ ಅಲಿಯಾಸ್ ತನು, ಗುರುರಾಜ್ ಎನ್ನುವಾತನ ಜೊತೆ ಸಲುಗೆ ಬೆಳೆಸಿದ್ದಳು. ಅದಕ್ಕೂ ಮುಂಚೆ ಅಶ್ವಿನಿ ಹಾಗೂ ರಾಘವೇಂದ್ರ ನಡುವೆ ಅಕ್ರಮ ಸಂಬಂಧ ಇತ್ತು. ಬಳಿಕ ಅದೇನಾಯ್ತೋ ಏನೋ ಇಬ್ಬರು ದೂರುವಾಗಿದ್ದು, ಬಳಿಕ ಅಶ್ವಿನಿ, ಗುರುರಾಜ್ ಎನ್ನುವಾತನನ್ನು ಪ್ರೀತಿಸಲಾರಂಭಿಸಿದ್ದಾಳೆ. ಇದು ರಾಘವೇಂದ್ರನ ಆಕ್ರೋಶಕ್ಕೆ ಕಾರಣವಾಗಿದ್ದು, ಮಾಜಿ ಪ್ರೇಯಿಸಿ ಅಶ್ವಿನಿ ಹಿಂದೆ ಬಿದ್ದು ಕಿರುಕುಳ ನೀಡಿದ್ದಾನೆ. ಬಳಿಕ ಅಶ್ವಿನಿ ಈ ವಿಚಾರವನ್ನು ತನ್ನ ಪ್ರಿಯಕರ ಗುರುರಾಜ್ ಗೆ ತಿಳಿಸಿದ್ದಾಳೆ. ಇದರಿಂದ ಕೋಪಗೊಂಡ ಗುರುರಾಜ್, ರಾಘವೇಂದ್ರಗೆ ಬುದ್ದಿ ಕಲಿಸಬೇಕೆಂದು ಸ್ಕೆಚ್ ಹಾಕಿದ್ದ. ಅದರಂತೆ ಮಾರ್ಚ್ 12ರಂದು ಅಶ್ವಿನಿ, ಪ್ರಿಯಕರ ಗುರುರಾಜ್ ಆ್ಯಂಡ್ ಗ್ಯಾಂಗ್, ರಾಘವೇಂದ್ರನನ್ನ ಕಿಡ್ನಾಪ್ ಮಾಡಿಕೊಂಡು ಕೀರ್ತಿ ನಗರದ ಸ್ಮಶನಕ್ಕೆ ಕರೆದೊಯ್ದು ಹಲ್ಲೆ ಮಾಡಿದೆ.
ಕೀರ್ತಿ ನಗರದ ಸ್ಮಶಾನಕ್ಕೆ ಆಗಮಿಸಿದ್ದ ಅಶ್ವಿನಿ ಸಹ ರಾಘವೇಂದ್ರ ಮೇಲೆ ಹಲ್ಲೆ ಮಾಡಿ ಕೋಪ ತೀರಿಸಿಕೊಂಡಿದ್ದಾಳೆ. ಇಷ್ಟಕ್ಕೆ ಬಿಡದ ಅಶ್ವಿನಿ ಆ್ಯಂಡ್ ಗ್ಯಾಂಗ್ ರಾಘವೇಂದ್ರನ ಖಾಸಗಿ ಅಂಗಕ್ಕೆ ಹಲ್ಲೆ ಮಾಡಿ ಕೊಲೆ ಮಾಡಿದೆ. ಬಳಿಕ ರಾಘವೇಂದ್ರ ಮೃತದೇಹವನ್ನು ಕಾರಿನಲ್ಲೇ ರಾಯಚೂರಿನ ಶಕ್ತಿ ನಗರಕ್ಕೆ ಸಾಗಿಸಿ ಬಳಿಕ ನದಿಗೆ ಬಿಸಾಡಿ ಎಸ್ಕೇಪ್ ಆಗಿತ್ತು.
ಇನ್ನೊಂದೆಡೆ ಮಾರ್ಚ್ 12ರಿಂದ ರಾಘವೇಂದ್ರ ಕಾಣೆಯಾಗಿರುವ ಬಗ್ಗೆ ಆತನ ಹೆಂಡ್ತಿ ಕಲಬುರಗಿ ಸ್ಟೇಷನ್ ಬಜಾರ್ ಠಾಣೆಗೆ ದೂರು ನೀಡಿದ್ದಳು. ಈ ದೂರು ಆಧರಿಸಿ ತನಿಖೆಗಿಳಿದ ಕಲಬುರಗಿ ಸ್ಟೇಷನ್ ಬಜಾರ್ ಠಾಣೆ ಪೊಲೀಸರಿಗೆ, ಅಶ್ವಿನಿ ಗ್ಯಾಂಗ್ ಕೃತ್ಯ ಬಟಾಯಬಲಾಗಿದ್ದು, ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಸದ್ಯ ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸರು ಮೂರು ಜನ ಆರೋಪಿಗಳನ್ನು ಬಂಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹತ್ಯೆಗೆ ಕಾರಣ ಬಿಚ್ಚಿಟ್ಟ ಪೊಲೀಸ್ ಆಯುಕ್ತ
ಇನ್ನು ಈ ಪ್ರಕರಣ ಸಂಬಂಧ ಕಲಬುರಗಿಯಲ್ಲಿ ಪೊಲೀಸ್ ಆಯುಕ್ತ ಡಾ.ಶರಣಪ್ಪ ಪ್ರತಿಕ್ರಿಯಿಸಿದ್ದು, ಕಿಡ್ನ್ಯಾಪ್ ಕೇಸ್ ತನಿಖೆ ನಡೆಸಿದಾಗ ಕೊಲೆ ಎನ್ನುವುದು ಗೊತ್ತಾಗಿದೆ. ಮಾಚ್೯ 12 ರಾಘವೇಂದ್ರ ಕಾಣೆಯಾಗಿದ್ದ. ಈ ಬಗ್ಗೆ ಆತನ ಪತ್ನಿ ದೂರು ನೀಡಿದ್ದಳು. ಕಿಡ್ನ್ಯಾಪ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದೆವು. ಈ ವೇಳೆ ಮೂವರು ಸೇರಿ ಕೊಲೆ ಮಾಡಿದ್ದು ಗೊತ್ತಾಗಿದೆ ಎಂದು ಮಾಹಿತಿ ನೀಡಿದರು.
ಅಶ್ವಿನಿ ಎನ್ನೋ ಮಹಿಳೆ ಜೊತೆಗೆ ರಾಘವೇಂದ್ರ ಅಕ್ರಮ ಸಂಬಂಧ ಹೊಂದಿದ್ದ. ಆದ್ರೆ, ಇತ್ತಿಚಗೆ ಅಶ್ವಿನಿ ರಾಘವೇಂದನಿಂದ ದೂರವಾಗಿದ್ದಳು. ಅಲ್ಲದೇ ಗುರುರಾಜ್ ಎನ್ನುವನ ಜೊತೆ ಸಲುಗೆ ಹೊಂದಿದ್ದಳು. ಇದರಿಂದ ರಾಘವೇಂದ್ರ ಕೇರಳಿದ್ದು, ಪದೇ ಪದೇ ಅಶ್ವಿನಿಯನ್ನ ಪೀಡಿಸುತ್ತಿದ್ದ. ಬಳಿಕ ಈ ವಿಷಯವನ್ನ ಅಶ್ವಿನಿ ಗುರುರಾಜ್ ಗೆ ತಿಳಿಸಿದ್ದಳು. ನಂತರ ಇಬ್ಬರು ಫ್ಲ್ಯಾನ್ ಮಾಡಿ ರಾಘವೇಂದ್ರನನ್ನು ಅಪಹರಿಸಿ ಮರ್ಡರ್ ಮಾಡಿದ್ದಾರೆ. ಮಾಚ್೯ 12ರಂದು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದರು. ಬಳಿಕ ಶವವನ್ನ ರಾಯಚೂರಿನ ಶಕ್ತಿನಗರದ ಬಳಿಯಿರುವ ನದಿಗೆ ಹಾಕಿದ್ದರು. ಸದ್ಯ ತನೀಖೆ ವೇಳೆ ಕೊಲೆ ಮಾಡಿದ್ದಾಗಿ ಗೊತ್ತಾಗಿದೆ. ಅಶ್ವಿನಿ, ಗುರುರಾಜ್, ಲಕ್ಷೀಕಾಂತ ಎನ್ನುವ ಮೂವರನ್ನ ಬಂಧಿಸಿದ್ದೆವೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಇದಿ…
C News TV Kannada News Online in cnewstv