Cnewstv | 05.07.2025 | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ ರಂಗಾಯಣದಿಂದ ತಂತ್ರಜ್ಞರ ಹಾಗೂ ರೆಪರ್ಟರಿಗೆ ಆಸಕ್ತ ಕಲಾವಿದರಿಂದ ಅರ್ಜಿ ಆಹ್ವಾನ.
ಶಿವಮೊಗ್ಗ : ಶಿವಮೊಗ್ಗ ರಂಗಾಯಣವು ರೆಪರ್ಟರಿಗೆ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ 03 ಜನ ತಂತ್ರಜ್ಞರು ಹಾಗೂ 12 ಜನ ಕಲಾವಿದರನ್ನು ಗೌರವ ಸಂಭಾವನೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಆಸಕ್ತ ಕಲಾವಿದರಿಂದ ಅರ್ಜಿ ಆಹ್ವಾನಿಸಿದೆ.
ತಂತ್ರಜ್ಞರ ನೇಮಕದ ನಿಬಂಧನೆಗಳು: ಸಂಗೀತ/ಧ್ವನಿ-ಬೆಳಕು/ರಂಗಸಜ್ಜಿಕೆ/ವಸ್ತ ವಿಭಾಗಗಳಲ್ಲಿ ಕನಿಷ್ಠ 10 ವರ್ಷಗಳ ರಂಗಾನುಭವ ಹೊಂದಿರಬೇಕು. ಕನ್ನಡ ಭಾಷೆಯನ್ನು ಓದುವ, ಬರೆದಯು, ಗ್ರಹಿಸುವ ಸಾಮರ್ಥ್ಯವಿರಬೇಕು. ರಂಗಾನುಭವದ ಜೊತೆಗೆ ಶೈಕ್ಷಣಿಕ ಅರ್ಹತೆಗಳು ಇದ್ದಲ್ಲಿ ಅಂತಹವರಿಗೆ ಆಧ್ಯತೆ ನೀಡಲಾಗುವುದು. ಗೌರವ ಸಂಭಾವನೆಯಾಗಿ ಮಾಸಿಕ ರೂ. 25,000/- ಗಳನ್ನು ನೀಡಲಾಗುತ್ತಿದ್ದು, ಇತರೆ ಯಾವುದೇ ಭತ್ಯೆಗಳು ಹಾಗೂ ಊಟ/ವಸತಿ ವ್ಯವಸ್ಥೆ ಇರುವುದಿಲ್ಲ.
ಕಲಾವಿದರ ನೇಮಕದ ನಿಬಂಧನೆಗಳು: 12 ಜನ ಕಲಾವಿದರಲ್ಲಿ ಕನಿಷ್ಠ 4 ಮಹಿಳೆಯರಿಗಾಗಿ ಮೀಸಲಾಗಿದೆ. ಹಾಗೂ 4 ಪ.ಜಾ/ವರ್ಗದ ಕಲಾವಿದರಿಗೆ ಮೀಸಲಿಡಲಾಗಿದೆ. ಕನಿಷ್ಠ 50 ಹುದ್ದೆಗಳನ್ನು ಪ್ರಾದೇಶಿಕ ವಲಯದ ಕಲಾವಿದರಿಗೆ ಮೀಸಲಿಡಲಾಗಿದೆ. ರಂಗ ಪರಿಣತಿಯೇ ಪ್ರಥಮ ಅರ್ಹತೆ ಹಾಗೂ ರಂಗಶಿಕ್ಷಣದ ಅರ್ಹತೆಗಳು ಅಪೇಕ್ಷೀಣಿಯ ಹೊರತು ಕಡ್ಡಾಯವಲ್ಲ. ರಂಗಪ್ರಯೋಗದಲ್ಲಿ ಭಾಗವಹಿಸಿದವರಿಗೆ ಆದ್ಯತೆಯನ್ನು ನೀಡಲಾಗುವುದು. ಆಯ್ಕೆಯಾದ ಕಲಾವಿದರು ರೆಪರ್ಟರಿಯ ಭಾಗವಾಗಿದ್ದು, ರಂಗಶಿಕ್ಷಣದ ಎಲ್ಲಾ ವಿಭಾಗಗಳಲ್ಲಿ ತರಬೇತಿ ಪಡೆಯುವುದರ ಜೊತೆಗೆ ಅಭಿನಯದ ಜವಾಬ್ಧಾರಿಯನ್ನು ನಿಭಾಯಿಸಬೇಕು. ಆಯ್ಕೆಯಾದ ಕಲಾವಿದರಿಗೆ ಮಾಸಿಕ ರೂ. 18,000/- ಗಳನ್ನು ನೀಡಲಾಗುತ್ತಿದ್ದು, ಇತರೆ ಯಾವುದೇ ಭತ್ಯೆಗಳು ಹಾಗೂ ಊಟ/ವಸತಿ ವ್ಯವಸ್ಥೆ ಇರುವುದಿಲ್ಲ. ಕಲಾವಿದರ ವಯಸ್ಸು 18 ರಿಂದ 32 ವರ್ಷದೊಳಗಿರಬೇಕು. ಪಾರಂಪರಿಕ ಕಲೆಯ ಕುಟುಂಬಗಳಿAದ ಬಂದ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಇಂತಹ ಪ್ರಕರಣದಲ್ಲಿ ವಯೋಮಿತಿಯನ್ನು 5 ವರ್ಷ ಸಡಿಲಿಸಬಹುದು.
ಆಯ್ಕೆಯಾದ ತಂತ್ರಜ್ಞರು ಮತ್ತು ಕಲಾವಿದರು ಹಾಗೂ ಆಯಾ ರಂಗಾಯಣದ ನಿರ್ದೇಶಕರ ಆಡಳಿತಾಧಿಕಾರಿಯವರ ಆಡಳಿತ ನಿಯಂತ್ರಣಕ್ಕೆ ಒಳಪಟ್ಟಿರುತ್ತಾರೆ ಹಾಗೂ ತರಬೇತಿಯ ಅವಧಿಯಲ್ಲಿ ನಡವಳಿಕೆ ಅನಪೇಕ್ಷಿತವೆಂದು ಕಂಡು ಬಂದಲ್ಲಿ ಅಂತಹ ಕಲಾವಿದರನ್ನು ತಕ್ಷಣದಲ್ಲಿ ತೆಗೆದು ಹಾಕುವ ಅಧಿಕಾರ ರಂಗಸಮಾಜಕ್ಕಿರುತ್ತದೆ.
ಆಸಕ್ತ ಕಲಾವಿದರು ಮತ್ತು ತಂತ್ರಜ್ಞರು ನಿಗದಿತ ನಮೂನೆ ಅರ್ಜಿಯನ್ನು ಶಿವಮೊಗ್ಗ ರಂಗಾಯಣ, ಸುವರ್ಣ ಸಂಸ್ಕೃತಿ ಭವನ, ಹೆಲಿಪ್ಯಾಡ್ ಹತ್ತಿರ, ಅಶೋಕನಗರ ಇವರಿಂದ ಖುದ್ದಾಗಿ ಅಥವಾ ಪೇಸ್‌ಬುಕ್ ಐಡಿ Shivamogga Rangayana ಅಥವಾ ವೆಬ್‌ಸೈಟ್ rangayanashivamogga.karnataka.gov.in ಮೂಲಕ ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಜು. 25 ರೊಳಗಾಗಿ ರಂಗಾಯಣ ಕಚೇರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಅಥವಾ ಇ-ಮೇಲ್ admin.rangayanashivamogga@gmail.com ಮೂಲಕ ಸಲ್ಲಿಸುವಂತೆ ರಂಗಾಯಣದ ಆಡಳಿತಾಧಿಕಾರಿ ಡಾ. ಶೈಲಜಾ ಎ.ಸಿ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-256353 ನ್ನು ಸಂಪರ್ಕಿಸುವುದು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಇದಿ…
Advt.
C News TV Kannada News Online in cnewstv