Breaking News

ಹಳೆ ಬೊಮ್ಮನಕಟ್ಟೆ ಹತ್ತಿರ ವ್ಯಕ್ತಿಯ ಬರ್ಬರ ಹತ್ಯೆ.

Cnewstv | 22.06.2025 | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಹಳೆ ಬೊಮ್ಮನಕಟ್ಟೆ ಹತ್ತಿರ ವ್ಯಕ್ತಿಯ ಬರ್ಬರ ಹತ್ಯೆ.

ಶಿವಮೊಗ್ಗ: ನಗರದ ಹಳೆ ಬೊಮ್ಮನಕಟ್ಟೆ ಯ ಕೆಂಚಮ್ಮ ದೇವಸ್ಥಾನದ ಹಿಂಬದಿಯ ಕೆರೆ ಪಕ್ಕದಲ್ಲಿ ಕೊಲೆಯಾದ ಪುರುಷನ ಶವವೊಂದು ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ.

ಕೊಲೆಗೀಡಾದವನನ್ನು ಅವಿನಾಶ್ (35) ಎಂದು ಗುರುತಿಸಲಾಗಿದೆ. ಕೊಲೆ ನಡೆದ ಜಾಗ ರಕ್ತಸಿಕ್ತವಾಗಿದ್ದು, ಮದ್ಯದ ಬಾಟಲಿ, ಖಾರಾ ಮಿಕ್ಸ್ಚರ್ ಎಲ್ಲಾ ಬಿದ್ದಿದೆ.

ವಿನೋಬನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಬಹುಷ: ತಡರಾತ್ರಿಯ ವರೆಗೂ ಸ್ನೇಹಿತರ ಜೊತೆ ಡ್ರಿಂಕ್ಸ್ ಪಾರ್ಟಿ ಮಾಡಿ ನಂತರ ಜಗಳವಾಗಿ ಅದು ಕೊಲೆಯಲ್ಲಿ ಅವಸಾನ ಆಗಿದೆ ಎಂದು ಪೋಲಿಸರು ಅಂದಾಜಿಸಿದ್ದಾರೆ.

ತುಂಗಾನಗರ ಠಾಣೆಯಿಂದ ಫೊರೆನ್ಸಿಕ್ ತಜ್ಞರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಆರೋಪಿತರ ಪತ್ತೆಗೆ ಶ್ವಾನದಳವನ್ನು ಕರೆತರಲಾಗಿದೆ. ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಇದಿ…

Leave a Reply

Your email address will not be published. Required fields are marked *

*