ಮಕ್ಕಳಿಗೆ ಕೊನೆಗೂ ಸಿಗ್ತು ಬ್ಯಾಗ್ ಮತ್ತು ಸ್ವೆಟರ್ -ಬ್ಯಾಗ್ ಗಳನ್ನು ಹಸ್ತಾಂತರಿಸಿದ ಸಂಸದ ಬಿ ವೈ ರಾಘವೇಂದ್ರ

ತೀರ್ಥಹಳ್ಳಿ : ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿದ್ಯಾರ್ಥಿಗಳಿಗೆ ಸಿಗುವ ಎಷ್ಟೋ ಸೌಲಭ್ಯಗಳು ಮಕ್ಕಳಿಗೆ ದೊರಕದೆ ಹೋಗುತ್ತಿದ್ದು ಅದರಲ್ಲಿ ಕೆಲವು ದಾನಿಗಳು ನೀಡುವ ಎಷ್ಟೋ ಸಾಮಗ್ರಿಗಳು ಅಧಿಕಾರಿಗಳ ಕಪಿ ಮುಷ್ಟಿಯಿಂದ ವಿದ್ಯಾರ್ಥಿಗಳಿಗೆ ಸಿಗುವ ವೇಳೆ ವಿದ್ಯಾರ್ಥಿಗಳು ಶಿಕ್ಷಣವನ್ನೇ ಮುಗಿಸಿರುತ್ತಾರೆ
ತೀರ್ಥಹಳ್ಳಿಯ ಬಿ ಆರ್ ಸಿ ಕೊಠಡಿಯೊಳಗೆ ಕಳೆದ ಒಂದು ವರ್ಷದಿಂದ ಕೋಣೆಯೊಳಗೆ ಸೇರಿದ್ದ ಮಕ್ಕಳಿಗೆ ಸಂಸದ ಬಿ ವೈ ರಾಘವೇಂದ್ರ ಅವರು ದಾನವಾಗಿ ನೀಡಿದ್ದ ಬ್ಯಾಗ್ ಗಳನ್ನು ಅಧಿಕಾರಿಗಳು ಹಸ್ತಾಂತರ ಮಾಡಿರಲಿಲ್ಲ.
ಸಂಸದರು ಕೊಟ್ಟ ಮಕ್ಕಳ ಶಾಲಾ ಬ್ಯಾಗ್ ದೂಳು ಹಿಡಿದು, ಮಳೆಗಾಲದಲ್ಲಿ ಚಂಡಿ ಹಿಡಿಯುವ ದೂರವಸ್ಥೆ ಆ ಕಟ್ಟಡದಲ್ಲಿ ಇದ್ದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳಿಗೆ ನೀಡುವ ಸೌಲಭ್ಯವನ್ನು ಏನು ಮಾಡುತ್ತಿದ್ದಾರೆ?
ಕೊನೆಗೆ ಆ ಎಲ್ಲಾ ಪ್ರೆಶ್ನೆಗಳಿಗೆ ಇಂದು ಉತ್ತರ ಸಿಕ್ಕಿದೆ. ಬರೋಬ್ಬರಿ ಒಂದು ವರ್ಷದ ನಂತರ ಮಕ್ಕಳ ಬೆನ್ನಿಗೆ ಚೀಲ ಹಾಕುವ ಕೆಲಸ ಆಗಿದೆ. ಸರಿ ಸುಮಾರು 4 ಸಾವಿರಕ್ಕೂ ಅಧಿಕ ಬ್ಯಾಗ್ ಗಳು, ಹಾಗೂ 2.5 ಸಾವಿರ ಕ್ಕೂ ಅಧಿಕ ಸ್ವೆಟರ್ ಗಳನ್ನು 1ನೇ ತರಗತಿಯಿಂದ 4 ನೇ ತರಗತಿ ವರೆಗೆ ಸ್ವೆಟರ್ ಹಾಗೂ 5 ರಿಂದ 7ನೇ ತರಗತಿ ಮಕ್ಕಳಿಗೆ ಬ್ಯಾಗ್ ನೀಡಿದ ಸಂಸದ ಬಿವೈ ರಾಘವೇಂದ್ರ ಅವರು ಮಕ್ಕಳಿಗೆ ನೀಡಿದರು.
ಸುದ್ದ ಹಾಗೂ ಮಾಹಿತಿಗಾಗಿ
ಸಂಪರ್ಕಿಸಿ 9916660399
C News TV Kannada News Online in cnewstv